22ಕ್ಕೆ 'ಸುನಾದ ವಿನೋದಿನಿ', 'ನನ್ನ ಬದುಕು ನನ್ನ ಫೋಟೋಗ್ರಫಿ' ಬಿಡುಗಡೆ
ಎಸ್.ಕೃಷ್ಣಮೂರ್ತಿ ಅವರ 'ಸುನಾದ...
ಬೆಂಗಳೂರು: ಎಸ್.ಕೃಷ್ಣಮೂರ್ತಿ ಅವರ 'ಸುನಾದ ವಿನೋದಿನಿ' ಹಾಗೂ ಕೆ.ಜಿ.ಸೋಮಶೇಖರ್ ಅವರ 'ನನ್ನ ಬದುಕು ನನ್ನ ಫೋಟೋಗ್ರಫಿ' ಪುಸ್ತಕಗಳು ಜೂನ್ 22ರಂದು ಬಿಡುಗಡೆಯಾಗುತ್ತಿವೆ.
ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಡಿ.ವಿ.ಜಿ ಸಭಾಂಗಣದಲ್ಲಿ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಚಿರಂಜೀವಿ ಸಿಂಗ್, ಎಸ್.ಆರ್.ರಾಮಸ್ವಾಮಿ ಹಾಗೂ ಎಸ್ ದಿವಾಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಬಿ.ಎಸ್. ಜಯಪ್ರಕಾಶ್ ಅವರಿಂದ ಕಾರ್ಯಕ್ರಮ ನಿರೂಪಣೆ ಮತ್ತು ಕೆ ಜಿ ಸೋಮಶೇಖರ್ ಅವರ ಛಾಯಾಚಿತ್ರಗಳ (ಕ್ರಿಯೇಟಿವ್ ಫೇಸಸ್ ಆಪ್ಹ್ ಕರ್ನಾಟಕ) ಸ್ಲೈಡ್ ಶೋ ನಡೆಸಿಕೊಡಲಿದ್ದಾರೆ.