ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಹಾಲ್ ಚಂದ್ ಬೆಂಬಲಿಸುತ್ತಿರುವ ಬಿಜೆಪಿ ವಿರುದ್ಧ ಮಾಯಾ ಕಿಡಿ

ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಕೇಂದ್ರ ಸಚಿವ..

Rashmi Kasaragodu
Updated On : 20 Jun 2014, 4:45 am

ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಕೇಂದ್ರ ಸಚಿವ ನಿಹಾಲ್ ಚಂದ್ ಮೇಘ್ವಾಲ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೇ ಇರುವ ಮೋದಿ ಸರ್ಕಾರದ ವಿರುದ್ಧ ಬಿಎಸ್ಪಿ ನೇತಾರೆ ಮಾಯಾವತಿ ಕಿಡಿ ಕಾರಿದ್ದಾರೆ.

ಕೇಂದ್ರ ಸಚಿವ ಸಂಪುಟದಲ್ಲಿ ರಸಾಯನಿಕ ಹಾಗು ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿರುವ ನಿಹಾಲ್ ಚಂದ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು.

ಆದಾಗ್ಯೂ, ನಿಹಾಲ್ ಚಂದ್ ವಿರುದ್ಧ ಮೋದಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಬಿಜೆಪಿ ಸರ್ಕಾರದ ಬಗ್ಗೆ ನನಗೆ ಅಸಮಧಾನವಿದೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಮಾಯಾ ಹೇಳಿದ್ದಾರೆ.

ಚುನಾವಣೆಗೆ ಮುನ್ನ ಬಿಜೆಪಿ ಮತ್ತು ನರೇಂದ್ರ ಮೋದಿ ಮಹಿಳೆಯರ ರಕ್ಷಣೆಗೆ ನಾವು ಬದ್ಧರು ಎಂದು ಮಾತುಕೊಂಡಿದ್ದರು. ಆದರೆ ಇದೀಗ ಅವರ ಸಂಪುಟದಲ್ಲಿರುವ ಸಚಿವರೇ ಮಹಿಳೆಗೆ ದೌರ್ಜನ್ಯವೆಸಗಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತನಗೆ ನ್ಯಾಯ ಕೊಡಿ ಎಂದು ನೊಂದ ಮಹಿಳೆ ಅಂಗಾಲಾಚುತ್ತಿದ್ದಾರೆ. ಮೋದಿ ಸರ್ಕಾರದಿಂದ ಈ ರೀತಿಯ ಪ್ರತಿಕ್ರಿಯೆ ಬಯಸಿಲ್ಲ ಎಂದು ಮಾಯಾ ಹೇಳಿದ್ದಾರೆ.

ಏನಿದು ಪ್ರಕರಣ
: 2010ರಲ್ಲಿ ಮಹಿಳೆಯನ್ನು ದೌರ್ಜನ್ಯವೆಸಗಿದ ಪ್ರಕರಣಲೊಂದು ಜೈಪುರ್‌ನ ವೈಶಾಲಿ ನಗರ ಪೊಲೀಸು ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿಹಾಲ್ ಚಂದ್ ಭಾಗಿಯಾಗಿದ್ದಾರೆ ಎನ್ನಲಾಗಿದೆ.  ನಂತರ ಆ ಪ್ರಕರಣವನ್ನು ಮುಚ್ಚಿ ಹಾಕಲಾಗಿದ್ದು, ಇದನ್ನು ಪ್ರಶ್ನಿಸಿದ ನ್ಯಾಯಾಲಯ ನಿಹಾಲ್ ಚಂದ್ ಸೇರಿದಂತೆ 18 ಮಂದಿಗೆ ಸಮನ್ಸ್ ನೀಡಿತ್ತು.
 
ಲೈಂಗಿಕ ದೌರ್ಜನ್ಯ ಆರೋಪವೆದುರಿಸುತ್ತಿರುವ ನಿಹಾಲ್ ಚಂದ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿದ್ದರೂ, ಬಿಜೆಪಿ ಮೌನವಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement