ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರೈಲು ಪ್ರಯಾಣ ದರ ಶೇ.14.2ರಷ್ಟು ಏರಿಕೆ

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನತೆಗೆ ಬೆಲೆ ಏರಿಕೆಯ ಮೊದಲ ಬಿಸಿ ಮುಟ್ಟಿಸಿದ್ದು, ಸಂಕಷ್ಟದಲ್ಲಿರುವ ರೇಲ್ವೆ ಇಲಾಖೆಯ ನಷ್ಟವನ್ನು ಭರಿಸಲು ಪ್ರಯಾಣಿಕರ ಜೆಬಿಗೆ ಕತ್ತರಿ ಹಾಕಿದೆ.

Lingaraj Badiger
Updated On : 20 Jun 2014, 7:05 am

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನತೆಗೆ ಬೆಲೆ ಏರಿಕೆಯ ಮೊದಲ ಬಿಸಿ ಮುಟ್ಟಿಸಿದ್ದು, ಸಂಕಷ್ಟದಲ್ಲಿರುವ ರೇಲ್ವೆ ಇಲಾಖೆಯ ನಷ್ಟವನ್ನು ಭರಿಸಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.

ನಿರೀಕ್ಷೆಯಂತೆ ರೈಲು ಪ್ರಯಾಣ ದರವನ್ನು ಶೇ.14.2ರಷ್ಟು ಹಾಗೂ ಸರಕು ಸಾಗಣೆಯ ದರವನ್ನು ಶೇ.6.5ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರ ಇಂದಿನಿದಂಲೇ ಜಾರಿಗೆ ಬರಲಿದೆ. ರೇಲ್ವೆ ಮಂಡಳಿ ದರ ಏರಿಕೆ ಮಾಡುವಂತೆ ರೇಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

ರೇಲ್ವೆಯಲ್ಲಿ ಸಂಪನ್ಮೂಲದ ಕೊರೆ ಇರುವುದರಿಂದ ಇಲಾಖೆಗೆ ವಿದೇಶಿ ನೇರ ಬಂಡವಾಳದ ಅಗತ್ಯ ಇದೆ. ಹೀಗಾಗಿ ರೇಲ್ವೆ ಶೀಘ್ರವೇ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ನಿನ್ನೆಯಷ್ಟೇ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement