ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಪ್ಪು ಹಣ: ಸ್ವಿಸ್ ಬ್ಯಾಂಕ್‌ನಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಅರುಣ್ ಜೇಟ್ಲಿ

Vishwanath S
Updated On : 23 Jun 2014, 3:03 am

ನವದೆಹಲಿ: ಸ್ವಿಸ್ ಬ್ಯಾಂಕ್‌ಗಳಲ್ಲಿನ ಭಾರತೀಯ ಖಾತೆದಾರರ ಮಾಹಿತಿಯನ್ನು ನೀಡಲು ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಸಿದ್ಧರಿದ್ದು, ಇಲ್ಲಿಯರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸೋಮವಾರ ತಿಳಿಸಿದ್ದಾರೆ.

ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ, ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಇಟ್ಟಿರುವ ಭಾರತೀಯ ಖಾತೆದಾರರ ವಿವರ ನೀಡುವಂತೆ ಕೇಳಿದ್ದೇವೆ. ಅದರಂತೆ ಸ್ವಿಸ್ ಬ್ಯಾಂಕ್ ಸಹ ವಿವರ ನೀಡಲು ಮುಂದಾಗಿದೆ ಎಂದರು.  

ಭಾರತೀಯ ಖಾತೆದಾರರ ವಿವರ ನೀಡುವ ಕುರಿತಾಗಿ ಸ್ವಿಜರ್ಲೆಂಡ್ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ಸ್ವಿಸ್ ಬ್ಯಾಂಕ್‌ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಸ್ವಿಸ್ ಬ್ಯಾಂಕುಗಳಲ್ಲಿ ವಿದೇಶೀಯರು ಇಟ್ಟಿರುವ ಒಟ್ಟು ಹಣ 1.6 ಲಕ್ಷಕೋಟಿ ಡಾಲರ್. ಇದರಲ್ಲಿ ಭಾರತೀಯರ ಹಣವಿರುವುದು ಶೇ.0.15 ರಷ್ಟು ಮಾತ್ರ. ಸ್ವಿಜರ್ಲೆಂಡ್ ಕೇಂದ್ರ ಬ್ಯಾಂಕಿಗೆ ಪ್ರಾಧಿಕಾರ ಎಸ್‌ಎನ್‌ಬಿ ಅಂಕಿ ಅಂಶಗಳ ಪ್ರಕಾರ, 2013ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಹಣ ಶೇ.43ರಷ್ಟು ಹೆಚ್ಚಳವಾಗಿದ್ದು, 14 ಸಾವಿರ ಕೋಟಿ ಎಂದು ತಿಳಿದುಬಂದಿದೆ.

ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಭಾರತೀಯರ ವಿವರವನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳಲೂ ಸ್ವಿಸ್ ಸರ್ಕಾರ ಮುಂದಾಗಿತ್ತು. ಅದರಂತೆ ಕೆಲ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪಟ್ಟಿಯನ್ನು ರಚಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement