ಜು. 8ಕ್ಕೆ ರೇಲ್ವೆ, 10ಕ್ಕೆ ಕೇಂದ್ರ ಬಜೆಟ್ ಮಂಡನೆ
ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಜುಲೈ 8ಕ್ಕೆ 2014-15ನೇ ಸಾಲಿನ ರೇಲ್ವೆ ಬಜೆಟ್...
ನವದೆಹಲಿ: ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಜುಲೈ 8ಕ್ಕೆ 2014-15ನೇ ಸಾಲಿನ ರೇಲ್ವೆ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ರೇಲ್ವೆ ಸಚಿವರಾಗಿ ಸದಾನಂದಗೌಡ ಅವರು ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದೆ.
ಇನ್ನು ಜುಲೈ 10ಕ್ಕೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಜೇಟ್ಲಿ ಅವರಿಗೂ ಸಹ ಇದು ಚೊಚ್ಚಲ ಬಜೆಟ್ ಆಗಿದ್ದು, ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಜು.7ರಿಂದ 14ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಜು.8ಕ್ಕೆ ರೇಲ್ವೆ ಹಾಗೂ 10ಕ್ಕೆ ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.
ಅರುಣ್ ಜೇಟ್ಲಿ ಅವರ ಮಧ್ಯಂತರ ಬಜೆಟ್ ಇದಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿ ನಿರೂಪಣೆಯಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಆರ್ಥಿಕ ಉತ್ತೇಜನಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಸಾಧ್ಯತೆ ಇದೆ.
ಜೇಟ್ಲಿ ಅವರು ಈಗಾಗಲೇ ಬಜೆಟ್ ಸಿದ್ಧತೆ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಜೇಟ್ಲಿ ಮುಂದೆ ಹಲವು ಸವಾಲುಗಳಿವೆ.