ಸುರಂಗ ಮಾರ್ಗದಲ್ಲಿ ಸಿಲುಕಿದ ಮೆಟ್ರೋ ರೈಲು; ಪ್ರಯಾಣಿಕರು ಅಸ್ವಸ್ಥ
ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೊಲ್ಕತ್ತಾದ ಪಾರ್ಕ್...
ಕೊಲ್ಕತ್ತಾ: ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೊಲ್ಕತ್ತಾದ ಪಾರ್ಕ್ ಸ್ಟೇಷನ್ ಮತ್ತು ಮೈದಾನ್ ಸ್ಟೇಷನ್ ನಡುವಿರುವ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲು ಸಿಲುಕಿಕೊಂಡ ಘಟನೆ ವರದಿಯಾಗಿದೆ.
ಸೋಮವಾರ ಬೆಳಗ್ಗೆ ಮೈದಾನ್ ನಿಲ್ದಾಣದಿಂದ ಹೊರಟ ಮೆಟ್ರೋ ರೈಲು ಸುರಂಗಮಾರ್ಗದಲ್ಲಿ ಸಿಲುಕಿಕೊಂಡಿತ್ತು. ಸುಮಾರು ಒಂದು ಗಂಟೆಗಳ ಕಾಲ ರೈಲು ಸುರಂಗ ಮಾರ್ಗದಲ್ಲೇ ಬಾಕಿಯಾಗಿತ್ತು.
ಈ ವೇಳೆ ಸುರಂಗದೊಳಗೆ ಸರಿಯಾದ ವಾಯು ಸಂಚಾರ ಲಭ್ಯವಾಗದೇ ರೈಲಿನಲ್ಲಿದ್ದ 100ಕ್ಕೂ ಹೆಚ್ಚು ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ.
ಇದೀಗ ತಾಂತ್ರಿಕ ದೋಷವನ್ನು ತಜ್ಞರು ಸರಿಪಡಿಸಿದ್ದು, ರಕ್ಷಣಾ ತಂಡ ನೆರವಿಗೆ ಧಾವಿಸಿದೆ.
ರೈಲಿನಲ್ಲಿ ಉಸಿರುಗಟ್ಟಿ ಅಸ್ವಸ್ಥಗೊಂಡ ಪ್ರಯಾಣಿಕರನ್ನು ರಕ್ಷಣಾ ತಂಡದ ಸಿಬ್ಬಂದಿಗಳು ರಕ್ಷಿಸಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.