ಫೋರಂ ಮಾಲ್ನಲ್ಲಿ ನಟ ಸತೀಶ್ನ 'ನೈಟ್ ಸಫಾರಿ'
ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಂ ಮಾಲ್ನಲ್ಲಿ ನಡೆದ ಮೂರು ದಿನಗಳ 'ನೈಟ್ ಸಫಾರಿ' ಭಾನುವಾರ ಅಂತ್ಯಗೊಂಡಿದ್ದು, ಶಾಪಿಂಗ್ ಸಫಾರಿಯಲ್ಲಿ ನಟ ನಿನಾಸಂ ಸತೀಶ್ ಅವರು ಭಾಗವಹಿಸಿದ್ದರು.
ಈ ಮೂರು ದಿನಗಳ 'ಮಿಡ್ನೈಟ್ ಷಾಪಿಂಗ್ ಸಫಾರಿ'ಯಲ್ಲಿ ಪಿವಿಆರ್ ಸಿನಿಮಾಗಳಲ್ಲಿ ಹಾರರ್ ಚಲನಚಿತ್ರಗಳ ಪ್ರದರ್ಶನ ನಡೆಯಿತು. ಈ ಚಿತ್ರಗಳನ್ನು ವೀಕ್ಷಿಸಲು ಗ್ರಾಹಕರು ಮುಗಿಬಿದ್ದುದು ವಿಶೇಷವಾಗಿತ್ತು.!
'ಲೂಸಿಯ' ಚಿತ್ರದ ನಟ ಸತೀಶ್ ಅವರ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು. ಬೆಂಗಳೂರಿನಲ್ಲಿ ಈ ರೀತಿ ತಡರಾತ್ರಿಯವರೆಗೆ ವಿಶೇಷ ಷಾಪಿಂಗ್ ಮೇಳವನ್ನು ಆಯೋಜಿಸುವ ಮೂಲಕ ಫೋರಂ ಮಾಲ್ ಬೆಂಗಳೂರಿಗರಿಗೆ ವಿಶೇಷ ಅನುಭವವನ್ನು ನೀಡುವ ಪರಿಕಲ್ಪನೆಯನ್ನು ಅವರು ಶ್ಲಾಘಿಸಿದರು.
ತಡೆರಹಿತ ಷಾಪಿಂಗ್ನಲ್ಲಿ ಸಮಗ್ರವಾದ ಆಹಾರ ಮೇಳ ಹಾಗೂ ಚಲನಚಿತ್ರಗಳು ಎಲ್ಲರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಮಾಲ್ನ ಪ್ರವೇಶದ್ವಾರದ ಬಳಿ, ಕುಲ್ಫಿ, ಐಸ್ ಕ್ರೀಂ, ಕೇಂಡಿ, ಪಾಪ್ಕಾನರ್್, ಮೊಮೊಸ್, ಪಾವ್ ಭಾಜಿ ಹಾಗೂ ವಿವಿಧ ಚಾಟ್ಸ್ಗಳ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.