ಶೀಘ್ರದಲ್ಲೇ ಗ್ಯಾಸ್ ದರ ಏರಿಕೆ?
ನವದೆಹಲಿ: ರೈಲು ದರ ಏರಿಕೆ ಹಾಗೂ ಸಕ್ಕರೆ ಮೇಲಿನ ಆಮದು ಶುಲ್ಕ ಏರಿಕೆ ಬೆನ್ನಲ್ಲೆ ಹ್ಯಾಟ್ರಿಕ್ ಶಾಕ್ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಶೀಘ್ರದಲ್ಲೇ ಗ್ಯಾಸ್ ದರ ಏರಿಕೆ ಮಾಡಲಿದೆ.
ಈ ಸಂಬಂಧ ಇಂದನ ಸಚಿವಾಲಯ ಹಾಗೂ ಪ್ರಧಾನಿ ಕಚೇರಿ ನಡುವೆ ನಡಿಯುತ್ತಿರುವ ಚರ್ಚೆಗಳು ಗ್ಯಾಸ್ ದರ ಏರಿಕೆಯ ಸುಳಿವು ನೀಡಿವೆ.
ಪ್ರತಿ ತಿಂಗಳು ಡೀಸೆಲ್ ದರ 50 ಪೈಸೆ ಏರಿಕೆ ಮಾದರಿಯಲ್ಲೇ ಚಿಲ್ಲರೆ ಗೃಹ ಬಳಕೆಯ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್ಜಿ) ಹಾಗೂ ಕೊಳವೆ ಮೂಲಕ ಪೂರೈಸುವ ಅಡುಗೆ ಅನಿಲ(ಪಿಎನ್ಜಿ) ಗ್ಯಾಸ್ ದರವನ್ನು ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆ ಮೂಲಕ ಸಿಎನ್ಜಿ ದರ ಪ್ರತಿ ತಿಂಗಳು ಕೆ.ಜಿಗೆ 7.50 ರುಪಾಯಿ ಏರಿಕೆ ಮಾಡುವ ಸಾಧ್ಯತೆ ಇದೆ.
ಕಳೆದ ಮೇನಲ್ಲಿ ಯುಪಿಎ ಸರ್ಕಾರ ರುಪಾಯಿ ಅಪಮೌಲ್ಯ ಮತ್ತು ನಿರ್ವಹಣಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಿಎನ್ಜಿ ದರವನ್ನು 2.95 ರುಪಾಯಿ ಏರಿಕೆ ಮಾಡಿತ್ತು.