ಪ್ರಕರಣದಲ್ಲಿ ರಾಜಿಯಾಗಲ್ಲ : ಪ್ರೀತಿ
ಪ್ರೀತಿ ಜಿಂಟಾ ಮತ್ತು ಆಕೆಯ ಮಾಜಿ ಸ್ನೇಹಿತ, ಬ್ಯುಸಿನೆಸ್ ಪಾಟ್ನರ್ ನೆಸ್ ವಾಡಿಯಾ ಜತೆ ಯಾವುದೇ..
ಮುಂಬೈ: ಪ್ರೀತಿ ಜಿಂಟಾ ಆಕೆಯ ಮಾಜಿ ಸ್ನೇಹಿತ, ಬ್ಯುಸಿನೆಸ್ ಪಾಟ್ನರ್ ನೆಸ್ ವಾಡಿಯಾ ಜತೆ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ತಯಾರಿಲ್ಲ ಎಂದು ಮೂಲಗಳು ಹೇಳಿವೆ.
ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ನೆಸ್ ವಾಡಿಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರೀತಿ ಕೋರ್ಟ್ ಮೆಟ್ಟಲೇರಿದ್ದಳು.
ಈ ಆರೋಪಗಳೆಲ್ಲ ನಿರಾಧಾರ ಎಂದು ನೆಸ್ ವಾಡಿಯಾ ಹೇಳಿದ್ದರು. ಆದಾಗ್ಯೂ, ಖ್ಯಾತ ಉದ್ಯಮಿಯೊಬ್ಬರು ಮಧ್ಯಪ್ರವೇಶಿಸಿ ಪ್ರಸ್ತುತ ಪ್ರಕರಣವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದರೂ ಪ್ರೀತಿ ಪಟ್ಟು ಸಡಿಲಿಸಿಲ್ಲ ಎಂದು ಹೇಳಲಾಗಿದೆ.
ಪ್ರೀತಿ ಜತೆ ನೆಸ್ ವಾಡಿಯಾ ಅನುಚಿತ ವರ್ತನೆ ನಡೆಸಿದ್ದಾರೆ ಎಂದು ಜೈ ಕನೋಜ್ ಸಾಕ್ಷಿ ನುಡಿದಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ನೆಸ್ ಪ್ರೀತಿ ಜಿಂಟಾ ಅವರ ಕೂದಲು ಎಳೆದುದನ್ನು ನೋಡಿರುವುದಾಗಿ ಜೈ ಕನೋಜ್ ಹೇಳಿದ್ದಾರೆ. ಜೈ ಕನೋಜ್ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ್ದು, ಇನ್ನುಳಿದ ಸಾಕ್ಷಿದಾರರ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.