ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಂಗಾರು ವಿಳಂಬ: ಪಶ್ಚಿಮ ಭಾರತಕ್ಕೆ ಬರಗಾಲ ಭೀತಿ

Vishwanath S
Updated On : 1 Jul 2014, 7:19 am

ನವದೆಹಲಿ: ಮುಂಗಾರು ಮಳೆ ಅಭಾವದಿಂದಾಗಿ ಪ್ರಸಕ್ತ ವರ್ಷ ಪಶ್ಚಿಮ ಭಾರತದ ಬಹುತೇಕ ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಬಹುದು ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.

ಮುಂಗಾರು ವಿಳಂಬದಿಂದಾಗಿ ಕಂಗಾಲಾಗಿರುವ ಮಹಾರಾಷ್ಟ್ರದ ವಿದರ್ಭದ ನಿಯೋಗವೊಂದು ಸಚಿವರನ್ನು ಭೇಟಿ ಮಾಡಿ ಪರಿಸ್ಥಿಯನ್ನು ವಿವರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಧಾ ಮೋಹನ್ ಸಿಂಗ್, ಮುಂಗಾರು ವಿಳಂಬವಾಗಿದೆ. ಇದರಿಂದಾಗಿ ಪಶ್ಚಿಮ ಭಾರತದ ಮೇಲೆ ತೀವ್ರ ದುಷ್ಟರಿಣಾಮವಾಗಿದೆ. ಕೆಲವು ಭಾಗಗಳಲ್ಲಿ ಬರಗಾಲದಂತಹ ಪರಿಸ್ಥಿತಿಯೂ ಉಂಟಾಗಬಹುದು ಎಂಬ ಆಂತಕ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ವಿದರ್ಭದಂತೆ, ಬರಕ್ಕೆ ತುತ್ತಾಗಬಹುದಾದ ಪ್ರದೇಶಗಳಿಗಾಗಿ ರಾಜ್ಯ ಸರ್ಕಾರ ಜತೆಗೂಡಿ ಪ್ರತ್ಯೇಕ ತುರ್ತು ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಕುಡಿಯುವ ನೀರು ಹಾಗೂ ಮೇವು ಕೊರತೆ ಸಮಸ್ಯೆ ಎದುರಾಗದಂತೆ ಮುಜಾಗೃತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ವಿದರ್ಭ ಪ್ರಾಂತ್ಯ ಬರಪೀಡಿತ ಪ್ರದೇಶ. ರೈತರಿಗೆ ನೆರವಾಗುವಂತಹ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ನಾವು ಕೈಗೊಳ್ಳುತ್ತೇವೆ, ಬೆಳೆ ವೈಫಲ್ಯದಿಂದಾಗಿ ರೈತರು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಕೈಹಾಕಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.

ಜುಲೈ 6ರ ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು, ಬೆಳೆ ಹಾನಿ ಕಡಿಮೆಯಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement