ರಕ್ಷಿತ್, ಸಂಯುಕ್ತಾ ಚಾಂಪಿಯನ್
ಮೈಸೂರು: ಕರ್ನಾಟಕ ರಾಜ್ಯ ರ್ಯಾಂಕಿಂಗ್‌ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ರಕ್ಷಿತ್, ಸಂಯುಕ್ತಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ಭಾನುವಾರ ನಡೆದ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ, ರಕ್ಷಿತ್ ಅವರು ಎ. ಅರಸ್ ಅವರ ವಿರುದ್ಧ 11-8, 5-11, 10-12, 13-11, 14-12, 11-1 ಅಂತರದಲ್ಲಿ ಜಯ ಗಳಿಸಿದರೆ, ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಸಂಯುಕ್ತಾ ಅವರು, ಎಂ.ವಿ. ಸ್ಫೂರ್ತಿ ಅವರನ್ನು ಮಣಿಸಿ ನಳಂದ ಗುರುಕುಲ ಕಪ್ ಹೆಸರಿನ ಪ್ರಶಸ್ತಿಗೆ ಭಾಜನರಾದರು.
ಭಾನುವಾರವೇ ನಡೆದ ನಾನ್ ಮೆಡಲಿಸ್ಟ್ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಶಿವಶಿಶ್ ಬೋರಾ ಅವರು, ನಿಖಿಲ್ ನಂದ ಅವರನ್ನು 11-7, 11-8, 11-7 ಅಂತರದಿಂದ ಮಣಿಸಿ ಜಯಗಳಿಸಿದರು.