ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹುಡುಗಿಯರು ತುಂಡುಡುಗೆ ತೊಟ್ಟು ಪಬ್‌ಗೆ ಹೋಗುವುದು ಸರಿಯಲ್ಲ: ಸಚಿವ ಸುದೀನ್

ತುಂಡುಡುಗೆ ತೊಟ್ಟು ಹುಡುಗಿಯರು ಪಬ್‌ಗೆ ಹೋಗುವುದು ನಮ್ಮ...

Vishwanath S
Updated On : 1 Jul 2014, 4:26 am

ಪಣಜಿ: ತುಂಡುಡುಗೆ ತೊಟ್ಟು ಹುಡುಗಿಯರು ಪಬ್‌ಗೆ ಹೋಗುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂಬ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಯನ್ನು ಗೋವಾ ಹಿರಿಯ ಸಚಿವ ಸುದೀನ್ ಧವಾಲಿಕರ್ ಪುನರಾವರ್ತಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಮನೋಹರ್ ಫರಿಕ್ಕರ್ ಸಂಪುಟದಲ್ಲಿ ಲೋಕೋಪಯೋಗಿ ಖಾತೆ ಸಚಿವರಾಗಿರುವ ಸುದೀನ್ ಧವಾಲಿಕರ್, ಯುವತಿಯರು ತುಂಡುಡುಗೆ ತೊಟ್ಟ ಪಬ್‌ಗಳಿಗೆ ಹೋಗುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು, ಇದು ನಿಲ್ಲಬೇಕು. ಇಲ್ಲದಿದ್ದರೆ ನಮ್ಮ ಸಂಸ್ಕೃತಿ ವಿನಾಶ ಹೊಂದುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಮುತಾಲಿಕ್ ಪಬ್ ಸಂಸ್ಕೃತಿಯ ವಿರೋಧಿಯಾಗಿದ್ದು, ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ನಾವು ನಮ್ಮ ತನವನ್ನು ಮರೆಯಬಾರದು. ನಮ್ಮ ಸಂಸ್ಕೃತಿಯನ್ನು ನಾವೇ ಕಡೆಗಣಿಸಿದರೆ ಪರಿಸ್ಥಿತಿ ಮುರಾಬಟ್ಟೆಯಾಗುತ್ತದೆ ಎಂದಿದ್ದಾರೆ. ಅಲ್ಲದೆ ಮುತಾಲಿಕ್ ಏಕಪಕ್ಷಿಯವಾಗಿ ಯಾವುದೇ ಧರ್ಮದ ವಿರುದ್ಧವೂ ಅವರು ಮಾತನಾಡುತ್ತಿಲ್ಲ. ತಮ್ಮ ಧರ್ಮದ ಬಗ್ಗೆ ಮಾತನಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ಸುದೀನ್ ಧವಾಲಿಕರ್ ಹೇಳಿದ್ದಾರೆ.

ಮಂಗಳೂರಿನ ಪಬ್‌ವೊಂದರ ಮೇಲೆ 2009ರಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿ ಅಲ್ಲಿದ್ದ ಯುವಕ, ಯುವತಿಯರನ್ನು ಥಳಿಸಿದ್ದರು. ಭಾರತೀಯ ಸಂಪ್ರದಾಯದ ವಿರುದ್ಧ ಯುವತಿಯರು ನಡೆದುಕೊಂಡಿದ್ದಕ್ಕೆ ಈ ಕೃತ್ಯ ನಡೆಸಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದರು.

ಗೋವಾದಲ್ಲಿ ಶ್ರೀರಾಮಸೇನೆ ಕಚೇರಿಯನ್ನು ತೆಗೆಯಲು ಅವಕಾಶ ನೀಡಬಾರದು ಎಂಬ ಕಾಂದಗ್ರೆಸ್ ಬೇಡಿಕೆಯನ್ನು ವಿರೋಧಿಸಿರುವ ಅವರು, ನೀವು ಅಲ್ಲಿಗೆ ಹೋಗಬೇಡಿ, ಇಲ್ಲಿಗೆ ಬರಬೇಡಿ ಎಂದು ಯಾರನ್ನೂ ತಡೆಯಲು ಸಾಧ್ಯವಿಲ್ಲ. ನಾನು ಭಾರತೀಯನಾಗಿದ್ದು ಭಾರತದಲ್ಲಿ ಎಲ್ಲಿ ಬೇಕಾದರೂ ಹೋಗುವ ಅವಕಾಶವಿದೆ ಎಂದರು. ಸದ್ಯ ಗೋವಾದಲ್ಲಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಆ ಸಾಲಿನಲ್ಲಿ ಶ್ರೀರಾಮಸೇನೆಯೂ ಒಂದಾಗಲಿದೆ ಎಂದು ಸುದೀನ್ ಧವಾಲಿಕರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement