ಉಕ್ರೇನ್ನಿಂದ ಸೇನೆ ವಾಪಸ್ ಕರೆಸಿಕೊಳ್ಳಿ, ರಷ್ಯಾಗೆ ಒಬಾಮ ಎಚ್ಚರಿಕೆ
ಗಲಭೆಗ್ರಸ್ಥ ಉಕ್ರೇನ್ನಿಂದ ಕೂಡಲೇ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ರಷ್ಯಾಗೆ...
ವಾಷಿಂಗ್ಟನ್: ಗಲಭೆಗ್ರಸ್ಥ ಉಕ್ರೇನ್ನಿಂದ ಕೂಡಲೇ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ರಷ್ಯಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ನಲ್ಲಿ ಆಡಳಿತ ಮತ್ತು ಸೇನೆಯ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇಂಥ ಸಂದರ್ಭದಲ್ಲಿ ರಷ್ಯಾ, ಉಕ್ರೇನ್ಗೆ ಸೇನೆಯನ್ನು ಕಳೆಸಿರುವುದು ಸರಿಯಲ್ಲ. ಕೂಡಲೇ ಸೇನೆಯನ್ನು ವಾಪಸ್ ಕರೆಸಿಕೊಂಡು ಅಲ್ಲಿ ಪರಿಸ್ಥಿತಿಯನ್ನು ಶಾಂತಿಗೊಳಿಸಲು ಶ್ರಮಿಸಬೇಕು ಎಂದು ಒಬಾಮ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಎಚ್ಚರಿಕೆ ನೀಡಿದ್ದಾರೆ.
ಒಬಾಮ ಅವರು ಪುಟಿನ್ ಅವರೊಂದಿಗೆ ಸುಮಾರು 90 ನಿಮಿಷ ಮಾತುಕತೆ ನಡೆಸಿದ್ದು, ಈ ವೇಳೆ ಉಕ್ರೇನ್ನಲ್ಲಿ ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದೆ ಇಂತ ಸಂದರ್ಭದಲ್ಲಿ ಉಕ್ರೇನ್ನಲ್ಲಿ ಸೇನೆ ಕಳಿಸಿರುವುದು ವಿಶ್ವದ ಹಿತದೃಷ್ಟಿಯಿಂದ ಒಳಿತಲ್ಲ ಎಂದು ಪುಟಿನ್ ಅವರಿಗೆ ಸೂಚಿಸಿದ್ದಾರೆ.
ಇದಕ್ಕೂ ಮುನ್ನ ಉಕ್ರೇನ್ನಲ್ಲಿ ಜನಾಂಗೀಯ ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ತನ್ನ ಸೇನಾ ಕಾರ್ಯಚರಣೆ ನಡೆಸಿ ಎರಡು ವಿಮಾನ ನಿಲ್ದಾಣಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಅಲ್ಲದೆ ಉಕ್ರೇನ್ ಆಡಳಿತ ವಿರುದ್ಧ ನಾನು ಯುದ್ಧ ಸಾರಲು ಸಿದ್ಧ ಎಂದು ರಷ್ಯಾ ಘೋಷಿಸಿದ ಹಿನ್ನೆಲೆಯಲ್ಲಿ ಒಬಾಮ ಈ ಎಚ್ಚರಿಕೆ ನೀಡಿದ್ದಾರೆ.