ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೊನೆಗೂ ರೋಹಿತ್‌ನನ್ನು ಮಗ ಎಂದು ಒಪ್ಪಿಕೊಂಡ ಎನ್.ಡಿ ತಿವಾರಿ

ರೋಹಿತ್ ಶೇಖರ್‌ರ 6 ವರ್ಷಗಳ...

Vishwanath S
Updated On : 3 Mar 2014, 2:07 am

ನವದೆಹಲಿ: ರೋಹಿತ್ ಶೇಖರ್‌ರ 6 ವರ್ಷಗಳ ಭಾವನಾತ್ಮಕ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದ್ದು, ಕಾಂಗ್ರೆಸ್ ಹಿರಿಯ ನಾಯಕ ಎನ್.ಡಿ ತಿವಾರಿ ಅವರು ರೋಹಿತ್ ಶೇಖರ್‌ನನ್ನು ತನ್ನ ಮಗ ಎಂದು ಸೋಮವಾರ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ರೋಹಿತ್ ಶೇಖರ್‌ರ ತಂದೆ ಯಾರು? ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದ್ದು, ಎನ್‌ಡಿ ತಿವಾರಿ ಅವರು ರೋಹಿತ್‌ನನ್ನು ಮಗ ಎಂದು ಒಪ್ಪಿಕೊಂಡಿದ್ದಾರೆ. ಕಳೆದ ರಾತ್ರಿ ರೋಹಿತ್ ಶೇಖರ್ ಹಾಗೂ ಆತನ ತಾಯಿ ಉಜ್ವಾಲ ಶರ್ಮಾ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ರೋಹಿತ್‌ನನ್ನು ಮನಸ್ಪುರ್ತಿಯಾಗಿ ಮಗ ಎಂದು ಒಪ್ಪಿಕೊಂಡಿದ್ದರು.

ಇಂದು ಮಾದ್ಯಮಗಳ ಮುಂದೆ ರೋಹಿತ್‌ನನ್ನು ಎನ್.ಡಿ ತಿವಾರಿ ಬಹಿರಂಗವಾಗಿ ಮಗ ಎಂದು ಒಪ್ಪಿಕೊಂಡರು.

32 ವರ್ಷದ ರೋಹಿತ್ ಶೇಖರ್ ಎಂಬುವರು 87 ವರ್ಷದ ತಿವಾರಿ ತಮ್ಮ ತಂದೆಯಾಗಿದ್ದಾರೆ ಎಂದು 2008ರಲ್ಲಿ ದೂರು ದಾಖಲಿಸಿದ್ದರು. ನಿರಂತರವಾಗಿ ಆರು ವರ್ಷಗಳು ನಡೆದ ಕಾನೂನು ಸಮರದಲ್ಲಿ ಈ ಹಿಂದೆ ನಡೆದ ಡಿಎನ್‌ಎ ಪರೀಕ್ಷಾ ವರದಿಯಲ್ಲೂ ತಿವಾರಿಯವರು ರೋಹಿತ್‌ಗೆ ಜೈವಿಕ ತಂದೆಯೆಂದು ಸಾಬೀತಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement