ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಂಗಿನಲೋಕಕ್ಕೆ ರಮ್ಯಾ ವಿದಾಯ?

ಕಿರಿಯ ವಯಸ್ಸಿಗೆ ಸಂಸದೆ ಎನಿಸಿರುವ ಚಿತ್ರ ನಟಿ ರಮ್ಯಾ ಅವರು ಸ್ಯಾಂಡಲ್‌ವುಡ್‌ಗೆ...

Vishwanath S
Updated On : 3 Mar 2014, 5:55 am

ಬೆಂಗಳೂರು: ಕಿರಿಯ ವಯಸ್ಸಿಗೆ ಸಂಸದೆಯಾಗಿರುವ ನಟಿ ರಮ್ಯಾ ಅವರು ಸ್ಯಾಂಡಲ್‌ವುಡ್‌ಗೆ ಪೂರ್ಣ ವಿದಾಯ ಘೋಷಿಸಿ? ರಾಜಕೀಯದಲ್ಲಿ ಸಕ್ರಿಯರಾಗುವ ಸುಳಿವು ಕೊಟ್ಟಿದ್ದಾರೆ.

ಆರ್ಯನ್‌ ಚಿತ್ರದ ಚಿತ್ರೀಕರಣದ ವೇಳೆ ರಮ್ಯಾ ಈ ಇಂಗಿತವನ್ನು ವ್ಯಕ್ತಪಡಿಸಿದ್ದು ಈಗ ಕೈಯಲ್ಲಿರುವ ಚಿತ್ರವನ್ನು ಪೂರ್ಣಗೊಳಿಸಿ ಬಳಿಕ ಚಿತ್ರರಂಗದ ಬದುಕಿಗೆ ಪೂರ್ಣ ವಿದಾಯ ಘೋಷಿಸುವುದಾಗಿ ಹೇಳಿದ್ದಾರೆ.

ರಾಜಕೀಯ ರಂಗದಲ್ಲಿ  ತಾನಿನ್ನು ಸಕ್ರಿಯರಾಗಿ ದುಡಿಯುವುದಾಗಿ ಹೇಳಿದ ರಮ್ಯಾ, ಚಿತ್ರರಂಗದಲ್ಲಿ ಇದ್ದುಕೊಂಡು ರಾಜಕೀಯ ರಂಗವನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ತಾನು ರಾಜಕೀಯ ರಂಗವನ್ನೇ ನೆಚ್ಚಿಕೊಳ್ಳುವುದಾಗಿ ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದು. ಅತ್ಯಂತ ಕಿರಿಯ ವಯಸ್ಸಿಗೆ ಸಂಸದೆಯಾಗಿರುವ ರಮ್ಯಾ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅಭಿನಯದ "ಅಭಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement