ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ: ರಾಜೇಂದ್ರನ್

ಎಲ್ಲಾ ಸಂಗೀತಕ್ಕಿಂತಲೂ ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ ಎಂದು ತಮಿಳು ನಿರ್ದೇಶಕ ಹಾಗೂ ನಟ ಟಿ.ರಾಜೇಂದ್ರನ್..

Lingaraj Badiger
Updated On : 4 Mar 2014, 12:58 pm

ಬೆಂಗಳೂರು: ಎಲ್ಲಾ ಸಂಗೀತಕ್ಕಿಂತಲೂ ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ ಎಂದು ತಮಿಳು ನಿರ್ದೇಶಕ ಹಾಗೂ ನಟ ಟಿ.ರಾಜೇಂದ್ರನ್ ಅವರು ಹೇಳಿದ್ದಾರೆ.

ನಗರದಲ್ಲಿ ನಡೆದ 'ರಾಜ್ ಬಹದ್ದೂರ್‌' ಚಿತ್ರದ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡದ ರಾಜೇಂದ್ರನ್, ಕನ್ನಡ ಜನತೆಗೆ ಶುಭಾಶಯಗಳು. ಕನ್ನಡ ಕಲಿಯೋ ಆಸೆ ಇದ್ದು, ಇನ್ನು ಒಂದುವರೆ ತಿಂಗಳಲ್ಲಿ ಕನ್ನಡವನ್ನು ಕಲಿತು ಸುಲಲಿತವಾಗಿ ಮಾತನಾಡುತ್ತೇನೆ ಎಂದರು.

ತಾಯಿ ಚಾಮುಂಡೇಶ್ವರಿ ಶಾರದಾಂಬೆ ಹಾಗೂ ಕೊಲ್ಲೂರು ಮುಕಾಂಬಿಕ ಆಶಿರ್ವಾದಿಂದ ಕನ್ನಡದಲ್ಲೂ ಸಿನಿಮಾ ನಿರ್ಮಿಸುವೆ. ಎಲ್ಲಾ ಸಂಗೀತಕ್ಕಿಂತಲೂ ಕರ್ನಾಟಕ ಸಂಗೀತ ವಿಶ್ವ ಪ್ರಸಿದ್ಧವಾಗಿದೆ. ಸಂಗೀತಕ್ಕೆ ಭಾಷೆಯಿಲ್ಲ. ಕನ್ನಡ ಸಿನಿಮಾದಲ್ಲಿ ಹಾಡಿರುವುದು ಸಂತೋಷ ತಂದಿದೆ ಎಂದರು.

ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಹಾಗೂ ಶ್ರೀಶೃತಿ ಅಭಿನಯದ ರಾಜ್ ಬಹದ್ದೂರ್ ಚಿತ್ರದ ಒಂದು ಐಟಂ ಹಾಡಿನಲ್ಲಿ ಅನಿತಾ ಭಟ್ ಕಾಣಿಸಿಕೊಂಡಿದ್ದಾರೆ. ಜೀವನ್ ಕೃಪಾ ಮತ್ತು ರಘುಚರಣ್ ಅವರು ಜಂಟಿಯಾಗಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ಸಮಾರಂಭದಲ್ಲಿ ರಾಜೇಶ್, ರಾಗಿಣಿ, ಶೃತಿ, ಸಾಹಿತಿ ದೊಡ್ಡರಂಗೇಗೌಡ, ಲಹರಿ ವೇಲು, ಶಾಸಕ ಶಂಕರಮೂರ್ತಿ ಅವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement