ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಿಯಾಖಾನ್ ಆತ್ಮಹತ್ಯೆ ಪ್ರಕರಣ: ತಾಯಿಯಿಂದಲೇ ಕುಟುಕು ಕಾರ್ಯಚರಣೆ

ಬಾಲಿವುಡ್ ನಟಿ ಜಿಹಾ ಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಜಿಯಾಖಾನ್ ತಾಯಿ ರಾಬಿಯಾ ಸ್ವತಃ ಕುಟುಕು ಕಾರ್ಯಾಚರಣೆ...

Mainashree
Updated On : 4 Mar 2014, 3:38 am

ಮುಂಬೈ: ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಜಿಹಾಖಾನ್ ತಾಯಿ ರಾಬಿಯಾ ಸ್ವತಃ ಕುಟುಕು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಜಿಯಾಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವಳನ್ನು ಹತ್ಯೆಗೈಯ್ಯಲಾಗಿದೆ ಎಂದು ತಾಯಿ ರಾಬಿಯಾ ಆರೋಪಿಸಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಸಂಗ್ರಹಿಸಲಾಗಿದೆ ಎಂದು ರಾಬಿಯಾ ಹೇಳಿದ್ದಾರೆ.

ಜಿಯಾಳನ್ನು ಹತ್ಯೆ ಮಾಡಲಾಗಿದೆ. ಇದು ಆತ್ಮಹತ್ಯೆಯಲ್ಲ. ಆದರಿಂದ ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡೆ ರಚಿಸಿ ಎಂದು ರಾಬಿಯಾ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಪ್ರಮುಖ ಸಾಕ್ಷಿಯ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಸಂಗ್ರಹಿಸಲಾಗಿದೆ. ಪೊಲೀಸರು ನೀಡಿರುವ ದಾಖಲೆಗಳು ಹಾಗೂ ಈ ಧ್ವನಿ ಮುದ್ರಿಕೆ ವಿಭಿನ್ನವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಸ್ವತಃ ನಾನೆ ಕುಟುಕು ಕಾರ್ಯಾಚರಣೆ ಕೈಗೊಂಡಿದ್ದು, ಅನೇಕ ಸಾಕ್ಷಿಗಳು ದೊರೆತಿವೆ. ಇವುಗಳ ಪ್ರಕಾರ ಜಿಯಾಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಿರುವುದಾಗಿ ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.

2013 ಜೂನ್ 3ರಂದು ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಆಕೆಯ ಬಾಯ್‌ಫ್ರೆಂಡ್ ಸೂರಜ್‌ನನ್ನು ಬಂಧಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ತದ ನಂತರ ಹೈಕೋರ್ಟ್ ಸೂರಜ್‌ಗೆ ಜಾಮೀನು ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement