ತಿಹಾರ್ ಜೈಲಿಗೆ ಸುಬ್ರತಾ ರಾಯ್
ತನ್ನ ಹೂಡಿಕೆದಾರರಿಗೆ ಹಣ ಹಿಂದುರಿಗಿಸಲು ಹಿಂದೇಟು ಹಾಕುತ್ತಿರುವ ಸಹರಾ ಮುಖ್ಯಸ್ಥ ...
ನವದೆಹಲಿ: ತನ್ನ ಹೂಡಿಕೆದಾರರಿಗೆ ಹಣ ಹಿಂದುರಿಗಿಸಲು ಹಿಂದೇಟು ಹಾಕುತ್ತಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಬಗ್ಗೆ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ರಾಯ್ ಪೊಲೀಸ್ ಬಂಧನದ ಅವಧಿಯನ್ನು ವಿಸ್ತರಿಸಿದೆ.
ಹಣ ನೀಡುವ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವಂತೆ ರಾಯ್ಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಅಲ್ಲಿಯವರೆಗೆ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಪ್ರಸ್ತುತ ಪ್ರಕರಣದ ವಿಚಾರಣೆಯನ್ನುಮಾರ್ಚ್ 11ರಂದುನಡೆಸುವುದಾಗಿ ಹೇಳಿದ ಕೋರ್ಟ್ ಮಂಗಳವಾರ ಸಂಜೆಸುಬ್ರತೋ ರಾಯ್ ಅವರನ್ನು ನ್ಯಾಯಾಂಗ ಬಂಧನ ವಿಧಿಸಿ
ತಿಹಾರ್ ಜೈಲಿಗಟ್ಟಿದೆ.