ನಟಿ ಶ್ರೀವಿಂದ್ಯಾ ಆತ್ಮಹತ್ಯೆಗೆ ಯತ್ನ
'ಮನದ ಮರೆಯಲ್ಲಿ' ಚಿತ್ರದ ನಾಯಕಿ ಶ್ರೀವಿಂದ್ಯಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗೆಳೆಯ ಮಂಜುನಾಥ್ನ ಪ್ರೀತಿಯಲ್ಲಿ...
ಬೆಂಗಳೂರು: "ಮನದ ಮರೆ"ಯಲ್ಲಿ ಚಿತ್ರದ ನಾಯಕಿ ಶ್ರೀವಿಂದ್ಯಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೆಳೆಯ ಮಂಜುನಾಥ್ನ ಪ್ರೀತಿಯಲ್ಲಿ ಮೋಸ ಹೋಗಿರುವುದೇ ಆತ್ಮಹತ್ಯೆ ಯತ್ನ ಮಾಡಲು ಕಾರಣ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಮೂಲದ ಶ್ರೀವಿಂದ್ಯಾ ಅಧಿಕ ಪ್ರಮಾಣದಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದರು. ಅವರನ್ನೀಗ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.