ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರೇಪ್ ಸಂತ್ರಸ್ತೆಯರಿಗೆ ಎರಡು ಬೆರಳುಗಳ ಪರೀಕ್ಷೆ ಮಾಡುವಂತಿಲ್ಲ

ಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳುಗಳ ಪರೀಕ್ಷೆಯ ಮೂಲಕ ಅತ್ಯಾಚಾರ ದೃಢೀಕರಣ ಪರೀಕ್ಷೆ ಮಾಡುವುದು ಸರಿಯಲ್ಲ ....

Rashmi Kasaragodu
Updated On : 4 Mar 2014, 3:52 am

ನಾಗ್ಪುರ್: ಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳುಗಳ ಪರೀಕ್ಷೆಯ ಮೂಲಕ ಅತ್ಯಾಚಾರ ದೃಢೀಕರಣ ಪರೀಕ್ಷೆ ಮಾಡುವುದು ಸರಿಯಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಎರಡು ಬೆರಳುಗಳ ಪರೀಕ್ಷೆ ಅವೈಜ್ಞಾನಿಕ ಎಂದು ಹೇಳಿದ ಸಚಿವಾಲಯ ಈ ಬಗ್ಗೆ ಎಲ್ಲ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿಯನ್ನು ನೀಡಿದೆ.

ಅತ್ಯಾಚಾರ ಸಂತ್ರಸ್ತೆಯರಿಗೆ ಆಸ್ಪತ್ರೆಯಲ್ಲಿ ಎರಡು ಬೆರಳುಗಳ ಪರೀಕ್ಷೆಯ ಮೂಲಕ ಕನ್ಯತ್ವ ಪರೀಕ್ಷೆ ಮಾಡುವುದು ಸಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಆರೋಗ್ಯ ಸಂಶೋಧನಾ ಇಲಾಖೆ (ಡಿಹೆಚ್‌ಆರ್) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಜಂಟಿ ಸಹಯೋಗದಿಂದ ತಜ್ಞರು ಆ ಮಾರ್ಗ ಸೂಚಿಯವನ್ನು ಸಿದ್ಧಪಡಿಸಿದ್ದು, ಎರಡು ಬೆರಳುಗಳ ಪರೀಕ್ಷೆ ವೈದ್ಯಕೀಯ  ಪ್ರಕ್ರಿಯೆಗಳಲ್ಲಿ 'ಭಯಾನಕ' ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.
 
ಮಹಿಳೆಯ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕಾಗಿ ಕಾರ್ಯಾಚರಣೆ ಮಾಡುತ್ತಿರುವ ಎಲ್ಲ ಸಂಘ ಸಂಸ್ಥೆಗಳಿಗೂ ಈ ಮಾರ್ಗಸೂಚಿಯನ್ನು ನೀಡಲಾಗುವುದು.

ಸದ್ಯ ಈ ಮಾರ್ಗಸೂಚಿಯ ಬಗ್ಗೆ ಸಾರ್ವಜನಿಕ ಮತ್ತು ತಜ್ಞರ ಅಭಿಪ್ರಾಯವನ್ನು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement