ಲೋಕಸಭಾ ಚುನಾವಣಾ ದಿನಾಂಕ ನಾಳೆ ಘೋಷಣೆ ಸಾಧ್ಯತೆ
ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ದಿನಾಂಕವನ್ನು ನಾಳೆ (ಬುಧವಾರ) ಪ್ರಕಟಿಸುವ ಸಾಧ್ಯತೆಯಿದೆ. ಮುಂದಿನ...
ನವದೆಹಲಿ: ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ದಿನಾಂಕವನ್ನು ನಾಳೆ (ಬುಧವಾರ) ಪ್ರಕಟಿಸುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯ ಮತದಾನವು ಏಪ್ರಿಲ್ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದ್ದು, ಈ ಬಾರಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಮತದಾನದ ದಿನಾಂಕ ಏಪ್ರಿಲ್ 7 ಮತ್ತು ಏಪ್ರಿಲ್ 10ರ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗದ ಆಪ್ತ ಮೂಲಗಳು ಹೇಳಿವೆ.
ಆದಾಗ್ಯೂ, ಚುನಾವಣಾ ದಿನಾಂಕ ಯಾವಾಗ ಎಂಬುದರ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಏಳು ಹಂತಗಳಲ್ಲಿ ಮತದಾನ ನಡೆಸಲ್ಪಡಲು ಯೋಚಿಸುತ್ತಿದ್ದರೂ, ಇದನ್ನು 6 ಹಂತಗಳಲ್ಲಿ ನಡೆಸಲು ಚುನಾವಣಾ ಆಯೋಗ ಯತ್ನಿಸುತ್ತಿದೆ. ಒಟ್ಟು 81 ಕೋಟಿ ಮತದಾರರು ಆ ಬಾರಿ ಮತದಾನ ಮಾಡಲಿದ್ದಾರೆ.