ಏಷ್ಯಾ ಕಪ್: ಭಾರತಕ್ಕೆ 160 ರನ್ ಗುರಿ
ಏಷ್ಯಾಕಪ್ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಭಾರತಕ್ಕೆ 160 ರನ್ಗಳ ಗುರಿಯನ್ನಿರಿಸಿದೆ...
ಮೀರ್ಪುರ್: ಏಷ್ಯಾಕಪ್ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಭಾರತಕ್ಕೆ 160 ರನ್ಗಳ ಗುರಿಯನ್ನಿರಿಸಿದೆ. ಟಾಸ್ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಏಷ್ಯಾಕಪ್ ಫೈನಲ್ ಪಂದ್ಯ ಶ್ರೀಲಂಕಾ ಮತ್ತು ಪಾಕ್ ನಡುವೆ ನಡೆಯಲಿದ್ದು, ಈ ಪಂದ್ಯ ಭಾರತದ ಪಾಲಿಗೆ ಇದು ಔಪಚಾರಿಕ ಕದನವಾಗಿದೆ.
ದುರ್ಬಲ ಅಫ್ಘಾನ್ ತಂಡದ ವಿರುದ್ಧ ಭಾರತದ ಬೌಲರ್ಗಳು ಬುಧವಾರ ಉತ್ತಮ ಪ್ರದರ್ಶನ ನೀಡಿದ್ದು, ಪ್ರಸ್ತುತ ತಂಡಕ್ಕೆ 159 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.
ಆಲ್ರೌಂಡರ್ ರವೀಂದ್ರ ಜಡೇಜಾ ಅವರು 30 ರನ್ ನೀಡಿ 4 ವಿಕೆಟ್ ಕಬಳಿಸಿದ್ದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್ 31 ರನ್ ನೀಡಿ 3 ವಿಕೆಟ್ ಗಳಿಸಿಕೊಂಡಿದ್ದಾರೆ.
ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಅಫ್ಘಾನ್ಗೆ 45.2 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಫ್ಘಾನ್ ಟೀಂನಲ್ಲಿ ಸಮೀವುಲ್ಲಾ ಶೆನ್ವಾರಿ ಅರ್ಧ ಶತಕಗಳಿದ್ದು, ನೂರ್ ಅಲಿ ಜದಾನ್ 31 ಹಾಗು ಮೊಹಮ್ಮದ್ ಶಹಜಾದ್ 22 ರನ್ ಗಳಿಸಿದ್ದಾರೆ.
ಅಫ್ಘಾನ್ನ 160 ರನ್ಗಳ ಬೆನ್ನತ್ತಿ ಬ್ಯಾಟಿಂಗ್ಗೆ ಇಳಿದಿರುವ ಭಾರತ ಭರ್ಜರಿಯಾಗಿಯೇ ರನ್ ಬೇಟೆ ಆರಂಭಿಸಿದೆ.
ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದಿರುವ ಶಿಖರ್ ಧವನ್ (28) ಹಾಗು ಅಜೆಂಕ್ಯ ರೆಹಾನೆ (26) ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇದೀಗ ಭಾರತ 15ನೇ ಓವರ್ನಲ್ಲಿ 63 ರನ್ಗಳನ್ನು ಗಳಿಸಿಕೊಂಡಿದೆ.