ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಏಷ್ಯಾಕಪ್: ಅಫ್ಘಾನ್ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ

ಏಷ್ಯಾಕಪ್ ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿದೆ...

Rashmi Kasaragodu
Updated On : 5 Mar 2014, 7:32 am

ಮೀರ್‌ಪುರ್: ಏಷ್ಯಾಕಪ್ ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್‌ಗೆದ್ದು ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಅಫ್ಘಾನಿಸ್ತಾನವನ್ನು 160ರನ್‌ಗಳಿಗೆ ಆಲೌಟ್ ಮಾಡಿತ್ತು.

ಭಾರತದ ಪರವಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು 30 ರನ್ ನೀಡಿ 4 ವಿಕೆಟ್ ಕಬಳಿಸಿದ್ದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್  31 ರನ್ ನೀಡಿ 3 ವಿಕೆಟ್ ಗಳಿಸಿಕೊಂಡಿದ್ದಾರೆ.

ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಅಫ್ಘಾನ್‌ಗೆ 45.2 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಫ್ಘಾನ್ ಟೀಂನಲ್ಲಿ ಸಮೀವುಲ್ಲಾ ಶೆನ್ವಾರಿ ಅರ್ಧ ಶತಕಗಳಿದ್ದು, ನೂರ್ ಅಲಿ ಜದಾನ್ 31 ಹಾಗು ಮೊಹಮ್ಮದ್ ಶಹಜಾದ್ 22 ರನ್ ಗಳಿಸಿದ್ದಾರೆ.

ಅಫ್ಘಾನ್‌ನ 160 ರನ್‌ಗಳ ಬೆನ್ನತ್ತಿ ಬ್ಯಾಟಿಂಗ್‌ಗೆ ಇಳಿದ ಭಾರತ ಆರಂಭದಲ್ಲಿಯೇ ಉತ್ತಮ ಪ್ರದರ್ಶನ ನೀಡಿತ್ತು.

ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದ ಶಿಖರ್ ಧವನ್ 78 ಬಾಲ್‌ಗಳನ್ನೆದುರಿಸಿ 60 ರನ್ ಗಳಿಸಿದರೆ  ಅಜೆಂಕ್ಯ ರೆಹಾನೆ 66 ಬಾಲ್‌ಗಳಲ್ಲಿ 56 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು.

24ನೇ ಓವರ್‌ನಲ್ಲಿ ಮಿರ್ವಿಸ್ ಅಶ್ರಫ್, ರೆಹಾನೆ ವಿಕೆಟ್ ಕಬಳಿಸಿದರೆ, 25ನೇ ಓವರ್‌ನಲ್ಲಿ ಮೊಹಮ್ಮದ್ ನಬಿ ಧವನ್ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.

ಮೂರನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್‌ಗೆ ಇಳಿದಿದ್ದು ಅವರಿಗೆ ದಿನೇಶ್ ಕಾರ್ತಿಕ್ ಉತ್ತಮ ಸಾಥ್ ನೀಡಿದ್ದಾರೆ.

ಪ್ರಸ್ತುತ ಪಂದ್ಯದಲ್ಲಿ ರೋಹಿತ್ ಶರ್ಮಾ (18) ಮತ್ತು ದಿನೇಶ್ ಕಾರ್ತಿಕ್ (21) ರನ್ ಗಳಿಸಿದ್ದು 33ನೇ ಓವರ್‌ನಲ್ಲಿ 160 ರನ್ ದಾಖಲಿಸುವ ಮೂಲಕ ಭಾರತ ವಿಜಯ ಸಾಧಿಸಿದೆ.

ಈಗಾಗಲೇ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಶ್ರೀಲಂಕಾ ಮತ್ತು ಪಾಕ್ ಅರ್ಹತೆ ಪಡೆದಿದ್ದು ಅಫ್ಘಾನ್ ವಿರುದ್ಧದ ಈ ಪಂದ್ಯ ಭಾರತದ ಪಾಲಿಗೆ ಔಪಚಾರಿಕ ಕದನವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement