ಕೇಜ್ರಿವಾಲ್ ಬಂಧನ; ವಿಚಾರಣೆ ನಂತರ ಬಿಡುಗಡೆ
ಬುಧವಾರ ಗುಜರಾತ್ನಲ್ಲಿ 4 ದಿನಗಳ ಪ್ರವಾಸ ಆರಂಭಿಸಿರುವ ಆಪ್ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ರನ್ನು ಪೊಲೀಸರು ವಶಕ್ಕೆ...
ಗುಜರಾತ್: ಬುಧವಾರ ಗುಜರಾತ್ನಲ್ಲಿ 4 ದಿನಗಳ ಪ್ರವಾಸ ಆರಂಭಿಸಿರುವ ಆಪ್ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಂತರ ಬಿಡುಗಡೆಗೊಳಿಸಿದ್ದಾರೆ. ಗುಜರಾತ್ನಲ್ಲಿ ರೋಡ್ ಶೋ ನಡೆಸಲು ಅನುಮತಿ ಇಲ್ಲದೇ ಇರುವ ಕಾರಣ ಕೇಜ್ರಿವಾಲ್ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ವಿಚಾರಣೆ ನಡೆಸಿ ಕೆಲವೇ ಕ್ಷಣಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು.
ದೆಹಲಿಯಲ್ಲಿ ವಿಜಯ ಗಳಿಸಿದ ನಂತರ ಕೇಜ್ರಿವಾಲ್ ಇದೇ ಮೊದಲ ಬಾರಿಗೆ ಕೇಜ್ರಿವಾಲ್ ಗುಜರಾತ್ಗೆ ಭೇಟಿ ನೀಡಿದ್ದಾರೆ. ಅಹ್ಮದಾಬಾದ್ನ ಏರ್ಪೋರ್ಟ್ನಲ್ಲಿ ಬಂದಿಳಿದ ಕೇಜ್ರಿವಾಲ್ ಅಲ್ಲಿಂದ ನೇರವಾಗಿ ಏಚ್ವಾಡಾ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಆಪ್ ನಾಯಕರಾದ ಮನೀಷ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೇಜ್ರಿವಾಲ್ ಪ್ರವಾಸಕ್ಕೆ ಸಾಥ್ ನೀಡಿದ್ದಾರೆ. ಗುಜರಾತ್ನಲ್ಲಿ ಕೇಜ್ರಿವಾಲ್ರನ್ನು ಆಪ್ ಪಕ್ಷದ ಚಿಹ್ನೆಯಾದ 'ಪೊರಕೆ' ಹಿಡಿದು ಬೆಂಬಲಿಗರು ಸ್ವಾಗತಿಸಿದ್ದಾರೆ. "ಶೀಲಾ ದೀಕ್ಷಿತ್ ಹಾರಿ ಹೈ, ಅಬ್ ಮೋದಿ ಕಿ ಬಾರಿ ಹೈ " ( ಶೀಲಾ ದೀಕ್ಷಿತ್ ಸೋತಿದ್ದಾರೆ, ಈಗ ಮೊದಿಯ ಸರದಿ) ಎಂದು ಘೋಷಣೆ ಕೂಗುತ್ತಾ ಆಪ್ ಬೆಂಬಲಿಗರು ಕೇಜ್ರಿವಾಲ್ರನ್ನು ಸ್ವಾಗತಿಸಿದ್ದರು.