ತಡರಾತ್ರಿ ಬಾರ್‌ಗೆ ಅನುಮತಿ: ಮಹಿಳಾ ಒಕ್ಕೂಟ ವಿರೋಧ
ಬೆಂಗಳೂರಿನಲ್ಲಿ ತಡರಾತ್ರಿವರೆಗೆ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ..
ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿವರೆಗೆ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಷ್ಟ್ರೀಯ ಮಹಿಳಾ ಒಕ್ಕೂಟ(ಎನ್‌ಎಫ್‌ಐಡಬ್ಲ್ಯು)ದ ರಾಜ್ಯ ಸಮಿತಿ ವಿರೋಧಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಒಕ್ಕೂಟ, ಈಗಾಗಲೇ ಬೆಂಗಳೂರು ನಗರವು ಸಮಾಜಘಾತುಕ ಶಕ್ತಿಗಳ ಆಗರವಾಗಿದ್ದು, ಕೊಲೆ, ಮಹಿಳೆಯರ ಮೇಲಿನ ಅತ್ಯಾಚಾರದಂತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಪಬ್ ಮತ್ತು ಬಾರ್‌ನಲ್ಲಿ ಉಂಟಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿರುವುದನ್ನು ನೋಡಬಹುದು. ಅಲ್ಲದೆ ಶೇ.90ರಷ್ಟು ಅಪರಾಧ ಕೃತ್ಯಗಳಿಗೆ ಮದ್ಯದ ಪ್ರಭಾವವಿರುವುದು ಸುಳ್ಳಲ್ಲ.
ಹೀಗಿದ್ದರೂ ವಾರದ ಎರಡು ದಿನ ತಡರಾತ್ರಿ 1ಗಂಟೆಯವರೆಗೆ ತೆರೆಯಲು ಅನುಮತಿ ನೀಡಿರುವುದು ಸಮಾಜದ ಹಿತದೃಷ್ಠಿಯಿಂದ ಸರಿಯಲ್ಲ. ಹೀಗಾಗಿ ಬಾರ್‌ಗೆ ಅನುಮತಿ ನೀಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಮಹಿಳಾ ಒಕ್ಕೂಟ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.