ದುಬೈನಲ್ಲಿ ಡಾ. ಎಸ್.ಕೆ ಜೈನ್ ಅವರ ಕೃತಿ ಬಿಡುಗಡೆ
ದುಬೈನ ಲೋಟಸ್ ಹೋಟೆಲ್ನಲ್ಲಿ ನಡೆದ...
ದುಬೈ: ದುಬೈನ ಲೋಟಸ್ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಜ್ಯೋತಿಷಿ ಡಾ.ಎಸ್.ಕೆ . ಜೈನ್ ಅವರ Ascendant Calculation ('ಲಗ್ನ'ಗಳ ಲೆಕ್ಕಾಚಾರ) ಎಂಬ ಪುಸ್ತಕವನ್ನು ಉದ್ಯಮಿ ಡಾ. ಬಿ.ಆರ್ ಶೆಟ್ಟಿ ಅವರು ಲೋಕಾರ್ಪಣೆ ಮಾಡಿದರು. ಪ್ರಸ್ತುತ ಸಮಾರಂಭದಲ್ಲಿ ವೀಣಾ ಜೈನ್ ಅವರು ಉಪಸ್ಥಿತರಿದ್ದರು.
ಖಗೋಳ ಶಾಸ್ತ್ರವನ್ನು ಆಧರಿಸಿ ಬೆಂಗಳೂರು ನಗರವನ್ನು ಕೇಂದ್ರೀಕರಿಸಿ ಬರೆದ ಈ ಪುಸ್ತಕದಲ್ಲಿ ಟೆಲಿಸ್ಕೋಪ್ ಸಹಾಯವಿಲ್ಲದೆಯೇ ಸಾಮಾನ್ಯ ಜನರು ಲಗ್ನಗಳನ್ನು ಸುಲಭವಾಗಿ ಲೆಕ್ಕಹಾಕುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ.
Ascendant Calculation (ಇಂಗ್ಲಿಷ್ ಆವೃತ್ತಿ) ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಬೆಲೆ ರು.15.