ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಎಸ್‌ವೈ ವಿರುದ್ಧ ಬೆಂಬಲಿಗರು ಗರಂ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರುಸೇರ್ಪಡೆಯಾದ ಬೆನ್ನಲ್ಲೆ ಅವರ ಬೆಂಬಲಿಗರು..

Lingaraj Badiger
Updated On : 5 Mar 2014, 5:44 am

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರುಸೇರ್ಪಡೆಯಾದ ಬೆನ್ನಲ್ಲೆ ಅವರ ಬೆಂಬಲಿಗರು ಬಂಡಾಯವೆದ್ದಿದ್ದಾರೆ. ಇದು ಬಿಜೆಪಿಗೆ ನಿರೀಕ್ಷಿತವೇ. ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗಿರವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.

ಬಂಡಾಯಕ್ಕೆ ಪ್ರಮುಖ ಕಾರಣ ಯಡಿಯೂರಪ್ಪ ಅವರ ಪರಮಾಪ್ತ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಬಿಎಸ್‌ವೈಗೆ ಬರೆದ ಪತ್ರ. ಯಡಿಯೂರಪ್ಪ ಅವರು ತಮ್ಮ ಜತೆಯಲ್ಲಿದ್ದ ನಿಷ್ಠಾವಂತರನ್ನೇ ಕಡೆಗಣಿಸಿದ್ದಾರೆ. ತಮ್ಮ ಪರ ಹೋರಾಟ ಮಾಡಿದವರನ್ನು ಬೀದಿಪಾಲು ಮಾಡಿದ್ದಾರೆ ಎಂದು ಲಕ್ಷ್ಮೀನಾರಾಯಣ ಆರೋಪಿಸಿದ್ದಾರೆ.

ಕೆಜೆಪಿ ಸ್ಥಾಪಿಸಲು ಬಿಎಸ್‌ವೈ ಅವರೊಂದಿಗೆ ಇದ್ದ ನಾಯಕರನ್ನು ಈಗ ಯಡಿಯೂರಪ್ಪ ಮರೆತಿದ್ದಾರೆ. ಅವರೆಲ್ಲ ಮುಖಭಂಗಕ್ಕೆ ಒಳಗಾಗಿದ್ದು, ಬೀದಿಪಾಲಾಗಿದ್ದಾರೆ. ಇದೆಲ್ಲ ನಿಮಗೆ ಸಮಾಧಾನ ತಂದಿದೆಯೇ ಎಂದು 15 ಪ್ರಶ್ನೆಗಳನ್ನು ಕೇಳಿ ಯಡಿಯೂರಪ್ಪ ಅವರಿಗೆ ಲಕ್ಷ್ಮೀನಾರಾಯಣ ಅವರು ನಿನ್ನೆ ಪತ್ರ ಬರೆದಿದ್ದದು.

ಅಲ್ಲದೆ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಇಂದು ಮಲ್ಲೇಶ್ವರಂನ ಅವರ ನಿವಾಸದಲ್ಲಿ ಧನಂಜಯ್ ಕುಮಾರ್, ಲೇಹರ್ ಸಿಂಗ್ ಸೇರಿದಂತೆ ಹಲವು ಅತೃಪ್ತ ನಾಯಕರು ಸಭೆ ಸೇರಿದ್ದರು. ಇದರ ಗಂಭೀರತೆಯನ್ನು ಅರಿತ ಯಡಿಯೂರಪ್ಪ, ತಮ್ಮ ವಿರುದ್ಧ ತಿರುಗಿಬಿದ್ದಿರುವ ಬೆಂಬಲಗರನ್ನು ಸಮಾಧಾನ ಪಡಿಸಲು ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಧನಂಜಯ್ ಕುಮಾರ್, ಲೇಹರ್ ಸಿಂಗ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲು ಪಕ್ಷದಲ್ಲೇ ವಿರೋಧವಿದೆ. ಹೀಗಾಗಿ ಈ ಮೂವರು ಈಗ ಬಂಡಾಯದ ಹಾದಿಯಲ್ಲಿದ್ದಾರೆ. ಲಕ್ಷ್ಮೀನಾರಾಯಣ ಅವರು ಬಹಿರಂಗವಾಗಿಯೇ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದು ಯಡಿಯೂರಪ್ಪ ಅವರನ್ನು ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement