ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಹುಲ್ ಟೀಕೆ ಬೆಂಬಲಿಸಿದ ಅಡ್ವಾಣಿ

ನರೇಂದ್ರ ಮೋದಿ ನೇತೃತ್ವದ ಪ್ರಚಾರ ಕಾರ್ಯಕ್ರಮಗಳನ್ನು ಟೀಕಿಸಿದ ರಾಹುಲ್...

Rashmi Kasaragodu
Updated On : 5 Mar 2014, 4:52 am

ನವದೆಹಲಿ:  ನರೇಂದ್ರ ಮೋದಿ ನೇತೃತ್ವದ ಪ್ರಚಾರ ಕಾರ್ಯಕ್ರಮಗಳನ್ನು ಟೀಕಿಸಿದ ರಾಹುಲ್ ಗಾಂಧಿ ಬಿಜೆಪಿ ಒನ್ ಮ್ಯಾನ್ ಶೋ ನಡೆಸುತ್ತಿದೆ ಎಂದು ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ, ಬಿಜೆಪಿ ಪಕ್ಷ ಈಗ ಒಬ್ಬ ವ್ಯಕ್ತಿಯನ್ನೇ ಬಿಂಬಿಸುತ್ತಿದ್ದು, ರಾಹುಲ್ ಗಾಂಧಿ ಇದನ್ನು ಸರಿಯಾಗಿಯೇ ಹೇಳಿದ್ದಾರೆ ಎಂದಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ನಾನಿದನ್ನು ಗಮನಿಸುತ್ತಿದ್ದೆ, ಮೋದಿಯವರೊಬ್ಬರದ್ದೇ ಪ್ರಚಾರ ಅಬ್ಬರದಿಂದ ನಡೆದು ಬರುತ್ತಿದೆ ಎಂದು ಅಡ್ವಾಣಿ ಹೇಳಿರುವುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಫೆಬ್ರವರಿ 27ರಂದು ನಡೆದ ಬಿಜೆಪಿ ಸಭೆಯಲ್ಲಿ ಮೋದಿ, ಅಡ್ವಾಣಿ ಮತ್ತು ರಾಜ್‌ನಾಥ್ ಸಿಂಗ್ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಬಿಜೆಪಿ ನಾಯಕರಲ್ಲಿ ಅಡ್ವಾಣಿ, ತಾನು ಬಿಜೆಪಿ ಒನ್ ಮ್ಯಾನ್ ಶೋ ಬಗ್ಗೆ ರಾಹುಲ್ ಟೀಕೆಯನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿರುವುದಾಗಿ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಅಡ್ವಾಣಿಯವರು ಹೀಗೆ ಹೇಳಿದಾಗ ಮೋದಿಯವರು ಮೌನ ವಹಿಸಿದ್ದು, ಈ ವಿಷಯವನ್ನು ಹೆಚ್ಚು ಮುಂದುವರಿಯಲು ಬಿಡಬೇಡಿ ಎಂದು ರಾಜ್ ನಾಥ್ ಸಿಂಗ್ ಹೇಳಿದ್ದರು ಎಂದು ್ದ ಬಿಜೆಪಿ ನಾಯಕರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement