ರೌಡಿಗಳಿಂದ ಹಲ್ಲೆಗೊಳಗಾಗಿದ್ದ ಕಾರ್ಪೊರೇಟರ್ ಪತಿ ಸಾವು
ರೌಡಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಅವರ ಪತಿ ..
ಬೆಂಗಳೂರು: ರೌಡಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಅವರ ಪತಿ ಶ್ರೀನಿವಾಸ್ ಅವರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವಾರ್ಡ್ ನಂ.55 ದೇವಸಂದ್ರ ಕಾರ್ಪೊರೇಟರ್ ಆಗಿರುವ ಮಂಜುಳಾ ಅವರ ಪತಿ ಶ್ರೀನಿವಾಸ್ ಅವರು ಇಂದು ಬೆಳಗ್ಗೆ ಕೆ.ಆರ್.ಪುರಂನ ಸರ್ಕಾರಿ ಕಾಲೇಜ್ ಬಳಿ ಇರುವ ಸಲೂನ್ಗೆ ತೆರಳಿದ್ದರು. ಈ ವೇಳೆ ಆಗಮಿಸಿದ ಮುಸುಕುಧಾರಿಗಳ ತಂಡವೊಂದು ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.