ಪ್ರಧಾನಿ ಸ್ಥಾನಕ್ಕೆ ಮೋದಿಗಿಂತ ಆಡ್ವಾಣಿ ಬೆಸ್ಟ್: ಅನಂತಮೂರ್ತಿ
ತೃತೀಯ ರಂಗದ ಬೆಂಬಲದಿಂದ ಆಡ್ವಾಣಿ..
ತುಮಕೂರು: ಪ್ರಧಾನಿ ಸ್ಥಾನಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗಿಂತ ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರು ಉತ್ತಮ ಆಯ್ಕೆಯಾಗಿದ್ದು, ತೃತೀಯ ರಂಗದ ಬೆಂಬಲದೊಂದಿಗೆ ಆಡ್ವಾಣಿ ಪ್ರಧಾನಿಯಾಗಬಹುದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರು ಹೇಳಿದ್ದಾರೆ.
ತುಮಕೂರು ವಿವಿಯಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ, ಭಾಷೆ, ಸಂಸ್ಕೃತಿ ಮತ್ತು ರಾಜಕೀಯ ಕುರಿತ ಸಂವಾದದಲ್ಲಿ ಮಾತನಾಡಿದ ಅನಂತಮೂರ್ತಿ, ಹಿಂದು ಪರ ಧೋರಣೆಯಿಂದ ಬಿಜೆಪಿಯನ್ನು ಜನ ತಿರಸ್ಕರಿಸುವ ಸಾಧ್ಯತೆ ಇದೆ ಎಂದಿದ್ದಾರೆ.
'ಆಡ್ವಾಣಿ ಅವರಿಂದ ನಾನು ಪದ್ಮಭೂಷ ಪ್ರಶಸ್ತಿ ಸ್ವೀಕರಿಸುತ್ತಿರುವಾಗಿ, ನಿಮ್ಮ ಪಕ್ಷ ಹಿಂದೂಳಿದ ವರ್ಗದ ವ್ಯಕ್ತಿ ಕಲ್ಯಾಣ ಸಿಂಗ್ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನಾಗಿ ಮಾಡಿದೆ' ಎಂದಿದ್ದೆ. ಇದಕ್ಕೆ, ನಾವು ಹಿಂದೂಳಿದ ವರ್ಗದ ಕೋಟಾದಲ್ಲಿ ಅವರನ್ನು ಸಿಎಂ ಮಾಡಿಲ್ಲ ಎಂದು ಆಡ್ವಾಣಿ ಪ್ರತಿಕ್ರಿಯಿಸಿದ್ದರು ಎಂದು ಆನಂತಮೂರ್ತಿ ತಿಳಿಸಿದರು.
ಇದೇ ವೇಳೆ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ ಸಾಮಾನ್ಯ ಜನರ ವಿಶ್ವಾಸಕ್ಕೆ ಧಕ್ಕೆ ಮಾಡಿದೆ ಎಂದು ಜ್ಞಾನಪೀಠಿ ಹೇಳಿದ್ದಾರೆ.