ಬಿಎಂಟಿಸಿ ಬಸ್ನಲ್ಲಿ ಹೊಗೆ: ಓರ್ವ ಸಾವು
ಬಿಎಂಟಿಸಿ ಬಸ್ಗೆ ಆಕಸ್ಮಿಕವಾಗಿ ಓರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ನಡೆದಿದೆ...
ಬೆಂಗಳೂರು: ಬಿಎಂಟಿಸಿ ಬಸ್ಗೆ ಆಕಸ್ಮಿಕವಾಗಿ ಓರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ನಡೆದಿದೆ.
ನಗರದ ಕೆ.ಆರ್ ಪುರಂ ಮೇಡಹಳ್ಳಿ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿರುವ ರೇಡಿಯೇಟರ್ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಯಭೀತರಾದ ಚಾಲಕ ಮತ್ತು ಪ್ರಯಾಣಿಕರು ಬಸ್ನಿಂದ ಧುಮುಕಿದ್ದಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಬಸ್ಗೆ ಸಿಲುಕಿ ಸಾವನ್ನಪ್ಪಿದ್ದಾರೆ.