ನಾಳೆ ಕಾಂಗ್ರೆಸ್ಗೆ ನಂದನ್ ನಿಲೇಕಣಿ ಅಧಿಕೃತ ಸೇರ್ಪಡೆ
'ಆಧಾರ್' ಕಾರ್ಡ್ ಖ್ಯಾತಿಯ ನಂದನ್...
ಬೆಂಗಳೂರು: 'ಆಧಾರ್' ಕಾರ್ಡ್ ಖ್ಯಾತಿಯ ನಂದನ್ ನಿಲೇಕಣಿ ಅವರು ಭಾನುವಾರ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನಂದನ್ ನಿಲೇಕಣಿ ಅವರು ನಾಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಪಕ್ಷದ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳಲಿದ್ದಾರೆ.