ಮಲೇಷಿಯಾ ಏರ್ಲೈನ್ಸ್ ವಿಮಾನ ದುರಂತ: 239 ಜನ ಜಲಸಮಾಧಿ
ಕೌಲಾಲಂಪುರದಿಂದ ಬೀಜಿಂಗ್ಗೆ ತೆರಳುತ್ತಿದ್ದ ಮಲೇಷಿಯಾ ಏರ್ಲೈನ್ಸ್ಗೆ ಸೇರಿದ ವಿಮಾನ..
ಕೌಲಾಲಂಪುರ: ಕೌಲಲಾಂಪುರದಿಂದ ಬೀಜಿಂಗ್ಗೆ ತೆರಳುತ್ತಿದ್ದ ಮಲೇಷಿಯಾ ಏರ್ಲೈನ್ಸ್ ಗೆ ಸೇರಿದ ವಿಮಾನವೊಂದು ಶನಿವಾರ ಬೆಳಗ್ಗೆ ವಿಯೆಟ್ನಾಂ ಬಳಿ ದಕ್ಷಿಣ ಚೀನಾದ ಸಮುದ್ರಕ್ಕೆ ಅಪ್ಪಳಿಸಿದ್ದು, ಈ ವಿಮಾನದಲ್ಲಿದ್ದ 12 ಸಿಬ್ಬಂದಿ ಹಾಗೂ 227 ಪ್ರಯಾಣಿಕರು ಜಲಸಮಾಧಿಯಾಗಿದ್ದಾರೆ.
ವಿಮಾನ ದುರಂತವನ್ನು ವಿಯೆಟ್ನಾಂ ಸರ್ಕಾರ ಖಚಿತ ಪಡಿಸಿದ್ದು, ಶೋಧನ ಕಾರ್ಯ ಭರದಿಂದ ಸಾಗಿದೆ.
ಬೋಯಿಂಗ್ ಬಿ777-200, ಎಂಎಚ್.370 ವಿಮಾನ ಇಂದು ಬೆಳಗಿನ ಜಾವ 12.21ಕ್ಕೆ ಕೌಲಲಾಂಪುರ ಬಿಟ್ಟಿದ್ದು, 6.30ಕ್ಕೆ ಜೀನಾ ರಾಜಧಾನಿ ಬೀಜಿಂಗ್ಗೆ ತಲುಪಬೇಕಿತ್ತು. ಆದರೆ ನಿಯಂತ್ರಣ ಕೊಠಡಿಯ ನಿಯಂತ್ರಣ ಕಳೆದುಕೊಂಡ ವಿಮಾನ, ವಿಯೆಟ್ನಾಂ ಬಳಿ ದಕ್ಷಿಣ ಚೀನಾದ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ ಯಾವ ಒಬ್ಬ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಅಲ್ಲದೆ ಈ ವಿಮಾನದಲ್ಲಿ ಚೆನ್ನೈನ ಒಬ್ಬರು ಮಹಿಳೆ ಸೇರಿದಂತೆ ಐವರು ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮಲೇಷಿಯಾ ಅಧಿಕಾರಿಗಳು ವಿಮಾನ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದು, ವಿಮಾನ ಟೇಕ್ಆಫ್ ಆದ ಕೇವಲ ಎರಡು ಗಂಟೆಗಳಲ್ಲೇ ಮಲೇಷಿಯಾ ವಿಮಾನ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿಸಲಾಗಿದೆ.