ಮುಜಾಫರ್‌ನಗರ ಗಲಭೆ: 10 ಮುಸ್ಲಿಂ ನಾಯಕರ ವಿರುದ್ಧ ಚಾರ್ಜ್‌ಶೀಟ್
ಮುಜಾಫರ್‌ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮುಸ್ಲಿಂ ನಾಯಕರ ವಿರುದ್ಧ ಶನಿವಾರ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ...
ಮುಜಾಫರ್‌ನಗರ: ಮುಜಾಫರ್‌ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮುಸ್ಲಿಂ ನಾಯಕರ ವಿರುದ್ಧ ಶನಿವಾರ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಬಿಎಸ್‌ಪಿ ಸಂಸದ ಕದಿರ್ ರಾಣ, ಇಬ್ಬರು ಪಕ್ಷದ ನಾಯಕರು ಮತ್ತು ಮಾಜಿ ಉತ್ತರ ಪ್ರದೇಶದ ಸಚಿವ ಸಯೀದ್ ಜಮಾ ಸೇರಿದಂತೆ 10 ನಾಯಕರ ವಿರುದ್ಧ ಜಾರ್ಜ್ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಜಾಫರ್‌ನಗರ ಗಲಭೆ ಪ್ರಕರಣದ ತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತನಿಖಾ ತಂಡ ಇಂದು ನ್ಯಾಯಾಮೂರ್ತಿ ನರೇಂದ್ರ ಕುಮಾರ್ ಅವರಿಗೆ ಜಾರ್ಜ್‌ಶೀಟ್ ಸಲ್ಲಿಸಿದ್ದಾರೆ.
2013 ಆಗಸ್ಟ್ 30 ರಂದು ಈ 10 ನಾಯಕರು ವಿವಾದಾತ್ಮಕ ಭಾಷಣ ಮಾಡಿ, ಜನರನ್ನು ಪ್ರಚೋದಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ದೂರಲಾಗಿದೆ.
ನಿಷೇಧಾಜ್ಞೆ ಪ್ರದೇಶದಲ್ಲಿ ಈ 10 ನಾಯಕರು ವಿವಾದಾತ್ಮಕ ಭಾಷಣ ಮಾಡಿದ್ದು, ನಿಯಮವನ್ನು ಉಲ್ಲಂಘಿಸಿದ್ದಾರೆ. ಇದರಿಂದ ಕೋಮುಗಲಭೆಗೆ ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ.