ಸುಷ್ಮಾ ವಿರೋಧವಿದ್ದರೂ, ರಾಜ್ಯ ಬಿಜೆಪಿಗೆ ಬಿಎಸ್ಆರ್ ಬೇಕಂತೆ
ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಪಕ್ಷ ವಿಲೀನಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ವಿರೋಧವಿದ್ದರೂ...
ನವದೆಹಲಿ: ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷ ವಿಲೀನಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ವಿರೋಧವಿದ್ದರೂ, ಕರ್ನಾಟಕ ಬಿಜೆಪಿ, ಬಿಎಸ್ಆರ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಕಸರತ್ತು ನಡೆಸುತ್ತಿದೆ.
ಕೇಂದ್ರ ಚುನಾವಣೆ ಸಮಿತಿ ಭೇಟಿಯ ವೇಳೆ, ಬಿಎಸ್ಆರ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ಬಿಜೆಪಿ ತಿಳಿಸಿದೆ ಎನ್ನಲಾಗಿದೆ.
ಸುಷ್ಮಾ ಸ್ವರಾಜ್ ವಿರೋಧದ ನಡುವೆಯೂ ಬಿಜೆಪಿಯ ಲೋಕಸಭಾ ಟಿಕೆಟ್ ಶ್ರೀರಾಮುಲುಗೆ ನೀಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯೊಂದಿಗೆ ಮೈತ್ರಿಯಾಗುವುದಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷ ನಾಯಕದ ಶ್ರೀರಾಮುಲು ತಿಳಿಸಿದ್ದರು. ಆದರೆ ಇದರ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಮೈತ್ರಿಗೆ ವಿರೋಧಿಸಿ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಇಷ್ಟಾದರೂ, ಶ್ರೀರಾಮುಲು ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು ಎನ್ನುವ ಕರ್ನಾಟಕ ಬಿಜೆಪಿಯ ಕಸರತ್ತಿನ ಪರಿಣಾಮ ಬಿಜೆಪಿ ಬಿಡುಗಡೆ ಮಾಡುವ 8 ಕ್ಷೇತ್ರದ ಅಭ್ಯರ್ಥಿಗಳ ಎರಡನೆ ಪಟ್ಟಿಯಲ್ಲಿ ತಿಳಿಯಲಿದೆ.