ಏಕದಿನ ರ್ಯಾಂಕಿಂಗ್: ನಂ.1 ಉಳಿಸಿಕೊಂಡ ಕೊಹ್ಲಿ
ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಬ್ಯಾಟ್ಸ್ಮೆನ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ....
ನವದೆಹಲಿ: ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಬ್ಯಾಟ್ಸ್ಮೆನ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ. ಭಾನುವಾರ ಐಸಿಸಿ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಎಬಿ ಡಿ ವಿಲ್ಲರ್ಸ್ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮೂರು ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಸರಾಸರಿ 189 ರನ್ ಗಳಿಸಿದ್ದು 12 ಪಾಯಿಂಟ್ ಗಿಟ್ಟಿಸಿ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಈ ಹಿಂದೆ 2014 ಜನವರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಅಂತಾರಾಷ್ಟ್ರೀಯ ಏಕದಿನ ಸರಣಿ ಪಂದ್ಯವನ್ನಾಡುವ ಮುನ್ನವೂ ಕೊಹ್ಲಿ ನಂಬರ್ 1 ಸ್ಥಾನವನ್ನಲಂಕರಿಸಿದ್ದರು.
ಇನ್ನುಳಿದಂತೆ ರ್ಯಾಕಿಂಗ್ ಪಟ್ಟಿಯಲ್ಲಿ ಶಿಖರ್ ಧವನ್ (8ನೇ ಸ್ಥಾನ), ರೋಹಿತ್ ಶರ್ಮಾ (22ನೇ ಸ್ಥಾನ ) ಮತ್ತು ರವೀಂದ್ರ ಜಡೇಜಾ 50ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಪಟ್ಟಿಯಲ್ಲಿ ಜಡೇಜಾ 5ನೇ ಸ್ಥಾನ ಹಾಗು ಅಶ್ವಿನ್ 14ನೇ ಸ್ಥಾನಗಳಿಸಿಕೊಂಡಿದ್ದಾರೆ. ಅದೇ ವೇಳೆ ಅಮಿತ್ ಮಿಶ್ರಾ 36ನೇ ಸ್ಥಾನದಲ್ಲಿದ್ದಾರೆ.