ಮಲೇಷ್ಯಾ ವಿಮಾನ ದುರಂತ: ಉಗ್ರರ ಕೈವಾಡದ ಶಂಕೆ?
ಕೌಲಾಲಂಪುರದಿಂದ ಬೀಜಿಂಗ್ಗೆ ತೆರಳುತ್ತಿದ್ದ ವಿಮಾನವೊಂದು ಶುಕ್ರವಾರ ತಡರಾತ್ರಿ ಸಮುದ್ರದ ಮಧ್ಯೆ ದುರಂತಕ್ಕೀಡಾದುದರ...
ಕೌಲಾಲಂಪುರ: ಕೌಲಾಲಂಪುರದಿಂದ ಬೀಜಿಂಗ್ಗೆ ತೆರಳುತ್ತಿದ್ದ ವಿಮಾನವೊಂದು ಶುಕ್ರವಾರ ತಡರಾತ್ರಿ ಸಮುದ್ರದ ಮಧ್ಯೆ ದುರಂತಕ್ಕೀಡಾದುದರ ಹಿಂದೆ ಉಗ್ರರ ಕೈವಾಡವಿದೆ ಎಂಬ ಶಂಕೆಯೆದ್ದಿದೆ. ನಾಪತ್ತೆಯಾಗಿರುವ ವಿಮಾನದ ಶುಕ್ರವಾರ ಭಾನುವಾರವೂ ಮುಂದುವರಿದಿದ್ದು ಅಮೆರಿಕ ಮತ್ತು ಚೀನಾ ಶೋಧ ಕಾರ್ಯದಲ್ಲಿ ಕೈಜೋಡಿಸಿವೆ.
ಕೌಲಾಲಂಪುರದಿಂದ ಬೀಜಿಂಗ್ಗೆ ಹೊರಟಿದ್ದ 370 ಸಂಖ್ಯೆಯ ವಿಮಾನದಲ್ಲಿ 239 ಮಂದಿ ಪ್ರಯಾಣಿಕರಿದ್ದರು. ವಿಮಾನ ಸಮುದ್ರ ಮಧ್ಯೆ ದುರಂತಕ್ಕೀಡಾಗಿರುವುದರಿಂದ ಪ್ರಯಾಣಿಕರೆಲ್ಲರೂ ಸಾವಿಗೀಡಾಗಿರು ಸಾಧ್ಯತೆಯಿದೆ.
ಪ್ರಸ್ತುತ ವಿಮಾನ ದಾರಿ ಮಧ್ಯೆ ನಾಪತ್ತೆಯಾಗಿ ಈಗ 30 ಗಂಟೆಗಳಿಗಿಂತ ಹೆಚ್ಚು ಕಾಲ ಕಳೆದಿದೆ.
ಆದಾಗ್ಯೂ, ಈ ದುರಂತದಲ್ಲಿ ಉಗ್ರರ ಕೈವಾಡವಿದೆ ಎಂಬವ ಶಂಕೆಯಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮಲೇಷ್ಯಾದ ಸಚಿವರು ಆದೇಶಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸಿದ ನಾಲ್ವರು ಪ್ರಯಾಣಿಕರು ನಕಲಿ ಪಾಸ್ಪೋರ್ಟ್ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಅಮೆರಿಕ ಎಫ್ಬಿಐ ಅಧಿಕಾರಿ
ಗಳನ್ನು ಮಲೇಷ್ಯಾಕ್ಕೆ ಕಳುಹಿಸಿದೆ.