ಮೋದಿಗೆ ರಾಜ್ ಠಾಕ್ರೆ ಬೆಂಬಲ
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಚುನಾವಣೆಯ ...
ಮುಂಬೈ: ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ ನಂತರ ಇದೀಗ ರಾಜ್ಠಾಕ್ರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವಿರೆಗ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಠಾಕ್ರೆ ತಮ್ಮ ಪಕ್ಷ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ನಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ನಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ನಾವು ಚುನಾವಣೆಯಲ್ಲಿ ಸಾಬೀತುಪಡಿಸಲಿದ್ದೇವೆ. ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವನ್ನು ನಾವು ಬೆಂಬಲಿಸುತ್ತಿದ್ದು, ಮೋದಿಯವರು ಪ್ರಧಾನಿಯಾಗಲೇ ಬೇಕು ಎಂದು ಠಾಕ್ರೆ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಂಬೈ ದಕ್ಷಿಣದಿಂದ ಶಾಸಕ ಬಾಲ ನಂದಗೋವ್ಂಕರ್, ಮುಂಬೈ ಸೌತ್ ಸೆಂಟ್ರಲ್ನಿಂದ ಆದಿತ್ಯಾ ಶಿರೋಡ್ಕರ್ , ಮುಂಬೈ ವಾಯವ್ಯದಿಂದ ಮಹೇಶ್ ಮಂಜ್ರೇಕರ್, ಕಲ್ಯಾಣ್ -ದೊಂಬಿವಿಲಿಯಿಂದ ರಾಜು ಪಾಟಿಲ್, ಶಿರೂರ್ನಿಂದ ಅಶೋಕ್ ಖಂದೇಬರಾದ್, ನಾಶಿಕ್ನಿಂದ ಡಾ.ಪ್ರದೀಪ್ ಪವಾರ್ ಮತ್ತು ಪುಣೆಯಿಂದ ದೀಪಕ್ ಪೈಗುಡೆ ಎಂಎನ್ಎಸ್ ಅಭ್ಯರ್ಥಿಗಳಾಗಿದ್ದಾರೆ.