ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಸಾವು
ಜಮ್ಮು ಕಾಶ್ಮೀರದ ಕುಪವಾರ್ ಜಿಲ್ಲೆಯ ಹ್ಯಾಂಡ್ವಾರ್ ಹಳ್ಳಿಯ ಬಳಿ ಇಬ್ಬರು ಶಂಕಿತ ಉಗ್ರರನ್ನು ಸೋಮವಾರ ಎನ್ಕೌಂಟರ್...
ಶ್ರೀನಗರ: ಜಮ್ಮು ಕಾಶ್ಮೀರದ ಕುಪವಾರ್ ಜಿಲ್ಲೆಯ ಹ್ಯಾಂಡ್ವಾರ್ ಹಳ್ಳಿಯ ಬಳಿ ಇಬ್ಬರು ಶಂಕಿತ ಉಗ್ರರನ್ನು ಸೋಮವಾರ ಎನ್ಕೌಂಟರ್ ಮಾಡಲಾಗಿದೆ.
ಲಷ್ಕರ್ ಇ ತೋಯ್ಬಾ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಎನ್ಕೌಂಟರ್ ಮಾಡಲಾಗಿದ್ದು, ಓರ್ವ ಭಾರತೀಯ ಸೈನಿಕ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಸಿಬ್ಬಂದಿಗಳನ್ನು ಗುರಿಯಾಗಿಸಿಟ್ಟುಕೊಂಡ ಉಗ್ರರು ದಾಳಿ ಮಾಡಿದ್ದಾರೆ, ಈ ವೇಳೆ ಸೇನಾಪಡೆಯು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದು, ಇನ್ನುಳಿದ ಉಗ್ರರು ಪರಾರಿಯಾಗಿದ್ದಾರೆ. ಘಟನೆಯಿಂದ ಸ್ಥಳಿಯ ಮನೆಗಳಿಗೆ ಹಾನಿಯುಂಟಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ವಲಯದಲ್ಲಿ ಕಳೆದ ಎರಡು ತಿಂಗಳಿನಿಂದ 20 ಉಗ್ರರನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.