'ಜೈ ಸಮೈಕ್ಯಾಂಧ್ರಾ' ಪಕ್ಷ ಕಟ್ಟಿದ ಕಿರಣ್ ಕುಮಾರ್ ರೆಡ್ಡಿ
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಹೊಸ ಪಕ್ಷ ಕಟ್ಟಿದ್ದು, ಸೋಮವಾರ ಪಕ್ಷದ ಹೆಸರನ್ನು ಅಧಿಕೃತವಾಗಿ...
ಹೈದ್ರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಹೊಸ ಪಕ್ಷ ಕಟ್ಟಿದ್ದು, ಸೋಮವಾರ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
'ಜೈ ಸಮೈಕ್ಯಾಂಧ್ರಾ' ಪಕ್ಷ ಎಂದು ಕಿರಣ್ ಕುಮಾರ್ ಅವರು ಹೈದ್ರಾಬಾದ್ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಹಿತ 'ಜೈ ಸಮೈಕ್ಯಾಂಧ್ರಾ' ಪಕ್ಷದ ಧ್ಯೇಯವಾಗಿದೆ ಎಂದು ಕಿರಣ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಆಂಧ್ರ ವಿಭಜನೆಯಾಗಲು ಮೂಲ ಕಾರಣ ಚಂದ್ರಬಾಬು ನಾಯ್ಡು ಎಂದು ಕಿರಣ್ ಕುಮಾರ್ ರೆಡ್ಡಿ ಆಪಾದಿಸಿದ್ದಾರೆ.
ತೆಲಂಗಾಣ ರಾಜ್ಯ ರಚನೆಯ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಆರಂಭದಿಂದಲೂ ಸಂಘರ್ಷ ಮಾಡುತ್ತಲೇ ಬಂದ ರೆಡ್ಡಿ ಇತ್ತೀಚೆಗೆ ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.