ಪೊಂಗಲ್, ಉಪ್ಪಿಟ್ಟು ಸೇವಿಸಿದ ರೆಬೆಲ್ಸ್ಟಾರ್ ಅಂಬರೀಶ್
ಹಿರಿಯ ನಟ ಹಾಗೂ ಸಚಿವ ರೆಬೆಲ್ಸ್ಟಾರ್ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಘನ ರೂಪದ ಆಹಾರ ಸೇವಿಸಿದ್ದಾರೆ...
ಸಿಂಗಾಪುರ್: ಹಿರಿಯ ನಟ ಹಾಗೂ ಸಚಿವ ರೆಬೆಲ್ಸ್ಟಾರ್ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಘನ ರೂಪದ ಆಹಾರ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನಲೆಯಲ್ಲಿ ಅಂಬರೀಶ್ ಅವರು ಸೋಮವಾರ ಬೆಳಿಗ್ಗೆ ಪೊಂಗಲ್ ಹಾಗೂ ಮಧ್ಯಾಹ್ನದ ಊಟವಾಗಿ ಉಪ್ಪಿಟ್ಟು ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.
ಐಸಿಯುವಿನಲ್ಲೇ ಸಣ್ಣ ಪ್ರಮಾಣದ ವ್ಯಾಯಾಮ ಮಾಡುತ್ತಿದ್ದು, ಇನ್ನೆರಡು ಮೂರು ದಿನದಲ್ಲಿ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.