ಮೋದಿ ಉತ್ತರ ಪ್ರದೇಶವನ್ನು ಕೈಬಿಡಲಿದ್ದಾರೆ: ಆಪ್
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶವನ್ನು ಕಡೆಗಣಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ(ಆಪ್) ಸೋಮವಾರ...
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶವನ್ನು ಕಡೆಗಣಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ(ಆಪ್) ಸೋಮವಾರ ಆರೋಪಿಸಿದೆ.
2014ರ ಲೋಕಸಭಾ ಚುನಾವಣೆ ಮುಗಿದ ನಂತರ ಮೋದಿ, ಉತ್ತರಪ್ರದೇಶದ ರಾಜ್ಯವನ್ನು ಕೈಬಿಡಲಿದ್ದಾರೆ ಎಂದು ಆಪ್ ದೂರಿದೆ.
ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ಮೋದಿ ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಎರಡು ಕಡೆ ಸ್ಪರ್ಧಿಸಿ ಗೆದ್ದರೆ, ಯಾವುದಾದರೂ ಒಂದು ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ. ಹಾಗಾದರೆ, ಅವರು ಮೊದಲಿಗೆ ಆಯ್ಕೆ ಮಾಡುವುದು ಉತ್ತರ ಪ್ರದೇಶವನ್ನು, ಏಕೆಂದರೆ ಗುಜರಾತ್ ಲೋಕಸಭಾ ಸ್ಥಾನಕ್ಕೆ ಅವರು ರಾಜಿನಾಮೆ ನೀಡುವುದಿಲ್ಲ. ಮೋದಿ ಉತ್ತರ ಪ್ರದೇಶವನ್ನು ಕೈಬಿಡಲಿದ್ದಾರೆ ಎಂದು ಆಪ್ ವಕ್ತಾರ ಅಶುತೋಷ್ ಹೇಳಿದ್ದಾರೆ.