ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರೈಲ್ವೇ ಲಂಚ ಪ್ರಕರಣ: ಬನ್ಸಾಲ್ ಸೋದರಳಿಯನ ವಿರುದ್ಧ ವಿಚಾರಣೆಗೆ ಅಸ್ತು

ರೈಲ್ವೇ ಲಂಚ ಪ್ರಕರಣದಲ್ಲಿ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರ ಸೋದರ ಮಗ ವಿಜಯ್ ಸಿಂಗ್ಲಾ...

Mainashree
Updated On : 11 Mar 2014, 6:37 am

ನವದೆಹಲಿ: ರೈಲ್ವೇ ಲಂಚ ಪ್ರಕರಣದಲ್ಲಿ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರ ಸೋದರ ಮಗ ವಿಜಯ್ ಸಿಂಗ್ಲಾ ಸೇರಿದಂತೆ 9 ಜನರ ವಿರುದ್ಧ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ.

ಒಳಸಂಚು ಮತ್ತು ಭ್ರಷ್ಟಾಚಾರದಡಿ ಪ್ರಕರಣ ದಾಖಲಿಸಿದ್ದು, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಅನುಮತಿ ನೀಡಿದೆ.

ವಿಜಯ್ ಸಿಂಗ್ಲಾ ಮತ್ತು 10 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆರೋಪಿಗಳಾದ ಮಹೇಶ್ ಕುಮಾರ್, ಸಿಂಗ್ಲಾ, ಮಧ್ಯವರ್ತಿ ಸಂದೀಪ್ ಗೋಯಲ್, ಸಮೀಪ್ ಸಂಧೀರ್, ಸುಶೀವ್ ದಾಗಾ, ಅಜಯ್ ಗರ್ಗ್, ರಾಹುಲ್ ಯಾದವ್, ಉದ್ಯಮಿ ನಾರಾಯಣ್ ರಾವ್ ಮಂಜುನಾಥ್ ಮತ್ತು ಆತನ ಸಹಾಯಕ ಎಂ.ವಿ ಮುರಳಿ ಕೃಷ್ಣ ಮತ್ತು ಸಿ.ವಿ ವೇಣುಗೋಪಾಲ್ ಮೊದಲಾದವರ ಹೆಸರು ಆರೋಪಪಟ್ಟಿಯಲ್ಲಿದೆ.

ರೈಲ್ವೇ ಲಂಚ ಪ್ರಕರಣ ಸಂಬಂಧ ಬನ್ಸಾಲ್ ಅವರನ್ನು ವಿಚಾರಣಾಧೀನ ಸಾಕ್ಷಿ ಎಂದು ಪರಿಗಣಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement