ಆಟೋ ಚಾರ್ಜ್ ಇಲ್ಲ ಎಂದಿದ್ದಕ್ಕೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ
ಮುಂಬೈ: ಆಟೋ ಚಾರ್ಜ್ ಇಲ್ಲ ಎಂದ ಮಾತ್ರಕ್ಕೆ ಕಿಡಿಕೇಡಿಗಳ ಗುಂಪೊಂದು ಅಪ್ರಾಪ್ತೆ ಹುಡಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಡೆದಿದೆ.
ಆಟೋ ರಿಕ್ಷಾದಲ್ಲಿ ಹೋಗಿದ್ದ 18 ವರ್ಷದ ಹುಡುಗಿ ಬಳಿ ಹಣವಿಲ್ಲದ ಕಾರಣ, ಆಟೋ ರಿಕ್ಷಾದ ಚಾಲಕ ಸೇರಿದಂತೆ ಇತರೆ ಕಿಡಿಗೇಡಿಗಳ ಗುಂಪು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಆಟೋ ಚಾಲಕನ ಬಳಿ ವಾಗ್ವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಬಂದ ಆರು ಆರೋಪಿಗಳು ಆಕೆಯ ಮೇಲೆ ದೈಹಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾರೆ. ಆಕೆ ಪಾರಾಗಲು ಯತ್ನಿಸಿದರು, ಬೆಂಬಿಡದ ಕಿಡಿಗೇಡಿಗಳು ಆಕೆಯನ್ನು ಹಿಂಬಾಲಿಸಿ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ನಂತರ ಬಂದ ಪೊಲೀಸರ ನಾಲ್ವರು ಆರೋಪಿಗಳನ್ನಾ ಬಂಧಿಸಿದ್ದು, ಅವರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.