ಆರ್ ಜೆಡಿಗೆ ಗುಡ್ ಬೈ: ಬಿಜೆಪಿಗೆ ಹಾಯ್ ಎಂದ ರಾಮ್ ಕೃಪಾಲ್ ಯಾದವ್
ರಾಷ್ಟ್ರೀಯ ಜನತಾ ದಳ(ಆರ್ಜೆಡಿ)ಯ ರೆಬೆಲ್ ಎಂದೇ ಗುರುತಿಸಿಕೊಂಡಿದ್ದ ರಾಮ್ ಕೃಪಾಲ್ ಯಾದವ್ ಬುಧವಾರ ಭಾರತೀಯ ಜನತಾ...
ನವದೆಹಲಿ: ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ಯ ರೆಬೆಲ್ ಎಂದೇ ಗುರುತಿಸಿಕೊಂಡಿದ್ದ ರಾಮ್ ಕೃಪಾಲ್ ಯಾದವ್ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಬಂಟ ಎಂದು ಹೇಳಲಾಗುತ್ತಿದ್ದ ರಾಮ್ ಕೃಪಾಲ್ ಬಿಜೆಪಿಯತ್ತ ವಾಲಿದ್ದು, ಆರ್ಜೆಡಿಗೆ ಗುಡ್ ಬೈ ಹೇಳಿದ್ದಾರೆ.
ಇಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ರಾಮ್ ಕೃಪಾಲ್ ಯಾದವ್, ಲಾಲು ಪ್ರಸಾದ್ ಯಾದವ್ ಅರಸು ಮನೆತನದ ರಾಜಕೀಯ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.
ರಾಮ್ ಕೃಪಾಲ್ ಯಾದವ್ ಅವರಿಗೆ ಬಿಜೆಪಿಯಿಂದ ಬಿಹಾರದ ಪಾಟಲಿಪುತ್ರ ಕ್ಷೇತ್ರದ ಟಿಕೆಟ್ ಸಿಗುವ ಅವಕಾಶ ಹೆಚ್ಚಿದ್ದು, ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಎದುರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.