ಐದು ದಿನವಾದರೂ ಮಲೇಷ್ಯಾ ವಿಮಾನದ ಸುಳಿವಿಲ್ಲ
239 ಪ್ರಯಾಣಿಕರು ಹೊತ್ತು ಸಾಗುತ್ತಿದ್ದ...
ಕೌಲಾಲಂಪುರ: 239 ಪ್ರಯಾಣಿಕರು ಹೊತ್ತು ಸಾಗುತ್ತಿದ್ದ ಮಲೇಷ್ಯಾ ವಿಮಾನ ನಾಪತ್ತೆಯಾಗಿ ಐದು ದಿನಗಳಾದರೂ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ.
ಕೌಲಾಲಂಪುರನಿಂದ ಚೀನಾದ ಬೀಜಿಂಗ್ನತ್ತ ಹೊರಟಿದ್ದ ವಿಮಾನ ದುರಂತಕ್ಕೀಡಾಗಿ ಐದು ದಿನಗಳಾಗಿವೆ. ಆದರೆ ವಿಮಾನ ಪತ್ತೆಯಾಗಿಲ್ಲ. ಹಾಗಾಗಿ ಭಾರತವು ಕೂಡ ವಿಮಾನದ ಶೋಧನೆಗಾಗಿ ಮಲೇಷಿಯಾ, ಚೀನಾ ವಿಯಟ್ನಾಂ ಸರ್ಕಾರದ ಕೈಜೋಡಿಸಿದೆ. ಶೋಧನೆ ಕಾರ್ಯಕ್ಕೆ ಭಾರತವು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಮಲೆಷ್ಯಾ ವಿಮಾನ ಶೋಧಕ್ಕೆ 10 ಉಪಗ್ರಹಗಳ ಬಳಕೆ ಮಾಡಲಾಗಿದ್ದು, 20 ವಿಮಾನಗಳು ಹಾಗೂ 40ಕ್ಕೂ ಹೆಚ್ಚು ಹಡಗುಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
ನಿನ್ನೆ ಮಲೇಷ್ಯಾ ವಿಮಾನ ಸೇನಾ ರಡಾರ್ನಲ್ಲಿ ಮಲಕ್ಕಾ ಬಳಿ ಇದೆ ಎಂಬ ಕುರುಹು ಸಿಕ್ಕಿತು ಎಂದು ಸೇನೆ ತಿಳಿಸಿತ್ತು. ಆದರೆ ಅಲ್ಲಿ ವಿಮಾನದ ಪತ್ತೆಯಾಗಿಲ್ಲ.
ಆದ್ದರಿಂದ ಇಂದು ಅಂಡಾಮಾನ ಬಳಿ ವಿಮಾನದ ಶೋಧನಾ ಕಾರ್ಯಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.