ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಲ್ಲು ಶಿಕ್ಷೆ ಬದಲು: ಕೇಂದ್ರ ಸಲ್ಲಿಸಿದ ಮೇಲ್ಮನವಿ ವಜಾ

15 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಡಿತ ವಿಚಾರಣೆ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್...

Mainashree
Updated On : 12 Mar 2014, 4:02 am

ನವದೆಹಲಿ: 15 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಡಿತ ವಿಚಾರಣೆ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ಗಲ್ಲು ಶಿಕ್ಷೆ ಪ್ರಧಾನದಲ್ಲಿ ಅನವಶ್ಯಕ ವಿಳಂಬವಾದಲ್ಲಿ ಶಿಕ್ಷೆ ಪ್ರಮಾಣ ಬದಲಿಸಬಹುದೆಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಕೋರಿ ಕೇಂದ್ರ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯ ನೀಡಿರುವ ತೀರ್ಪು ಕಾನೂನು ಬಾಹಿರ ಎಂದು ಹೇಳಿರುವ ಕೇಂದ್ರ ಸರ್ಕಾರ, ತೀರ್ಪು ಹಲವು ಲೋಪದೋಷಗಳಿಂದ ಕೂಡಿದೆ. ಹೀಗಾಗಿ ಘನ ನ್ಯಾಯಾಲಯ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು. ತೀರ್ಪಿನಿಂದಾಗಿ ಕಲಂ 21(ಬದುಕುವ ಹಕ್ಕು)ರತ್ತ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು ಆಕರ್ಷಿತರಾಗುವಂತಾಗುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಇತ್ತೀಚೆಗಿನ ತೀರ್ಪಿನ ಪ್ರತಿಯನ್ನು ಕೂಡ ಉದಾಹರಣೆಯಾಗಿ ಕೇಂದ್ರ ಸರ್ಕಾರ ಸಲ್ಲಿಸಿದೆ.

ಗಲ್ಲು ಶಿಕ್ಷೆ ಪ್ರದಾನದಲ್ಲಿ ಕೇಂದ್ರ ಸರ್ಕಾರ ತೋರುತ್ತಿದ್ದ ವಿಳಂಬ ಧೋರಣೆಯನ್ನು ಟೀಕಿಸಿದ್ದ ಅಪೆಕ್ಸ್ ಕೋರ್ಟ್, ಮಾನವೀಯತೆಯ ಆಧಾರದ ಮೇಲೆ ಗಲ್ಲು ಶಿಕ್ಷೆಯ ವಿಳಂಬ ಅಮಾನುಷ, ಅನಗತ್ಯ ಮತ್ತು ಕಾರಣ ರಹಿತ ವಿಳಂಬ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ನರಹಂತಕ ವೀರಪ್ಪನ್ ಸಹಚರರು ಸೇರಿದಂತೆ ಒಟ್ಟು 15 ಮಂದಿಯ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಬದಲಾಯಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement