ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ...

Mainashree
Updated On : 13 Mar 2014, 8:03 am

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ 10 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ.

ಹಿರಿಯ ಕಾಂಗ್ರೆಸ್ಸಿಗ ಜಾಫರ್ ಷರೀಫ್ ಅವರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಟಿಕೆಟ್‌ನ್ನು ರಿಜ್ವಾನ್ ಅರ್ಷದ್ ಅವರಿಗೆ ನೀಡಲಾಗಿದೆ.

ಲೋಕಸಭೆ ಚುನಾವಣೆಗೆ 2ನೇ ಪಟ್ಟಿಯಲ್ಲಿ 71 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಇದರಲ್ಲಿ 11 ಮಹಿಳೆಯರಿಗೆ ಸೇರ್ಪಡೆಗೊಂಡಿದ್ದಾರೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂತಿವೆ:
ಚಿಕ್ಕಬಳ್ಳಾಪುರ-ವೀರಪ್ಪಮೊಯ್ಲಿ
ದಕ್ಷಿಣ ಕನ್ನಡ - ಜನಾರ್ದನ ಪೂಜಾರಿ
ಶಿವಮೊಗ್ಗ - ಮಂಜುನಾಥ್ ಭಂಡಾರಿ
ಕೊಪ್ಪಳ - ಬಸವರಾಜ ಹಿಟ್ನಾಳ್
ಬೆಳಗಾವಿ - ಲಕ್ಷ್ಮಿ ಹೆಬ್ಬಾಳ್ಕರ್
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಚಿತ್ರದುರ್ಗ - ಚಂದ್ರಪ್ಪ
ರಾಯಚೂರು - ಬಿ.ವಿ. ನಾಯಕ್
ಬಾಗಲಕೋಟೆ - ಅಜಯ್ ಕುಮಾರ್ ಸರನಾಯಕ
ಬೆಂಗಳೂರು ಕೇಂದ್ರ -ರಿಜ್ವಾನ್ ಅರ್ಷದ್

ಇತರೆ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂತಿವೆ:
ಲಖನೌ ಲೋಕಸಭಾ ಕ್ಷೇತ್ರ-ರೀಟಾ ಬಹುಗುಣ ಜೋಷಿ
ಮೀರತ್ ಲೋಕಸಭಾ ಕ್ಷೇತ್ರ-ನಟಿ ನಗ್ಮಾ ಮೀರತ್
ಗಾಜಿಯಾಬಾದ್ ಲೋಕಸಭಾ ಕ್ಷೇತ್ರ- ನಟ ರಾಜ್ ಬಬ್ಬರ್
ಮೊರದಾಬಾದ್ ಲೋಕಸಭಾ ಕ್ಷೇತ್ರ- ನೂರ್ ಬಾನು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement