ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುಪ್ರೀಂ ಕೋರ್ಟ್, ಚು.ಆಯೋಗವನ್ನು ಅಣಕಿಸಿದ ಸಲ್ಮಾನ್ ಖುರ್ಷಿದ್

ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗವನ್ನು ವಿದೇಶಿ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಗುರುವಾರ ಲಂಡನ್‌ನಲ್ಲಿ...

Mainashree
Updated On : 13 Mar 2014, 4:26 am

ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗವನ್ನು ವಿದೇಶಿ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಗುರುವಾರ ಲಂಡನ್‌ನಲ್ಲಿ ಟೀಕಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗ ನೀಡಿರುವ ನಿರ್ದೇನದ ಪ್ರಕಾರ ನಾವು ಚುನಾವಣೆಯಲ್ಲಿ ಸೋಲಬೇಕೆಂಬುದು, ಗೆಲ್ಲಬಾರದು ಎಂಬ ಉದ್ದೇಶವಾಗಿದೆ ಎಂದು ಹೇಳುವ ಮೂಲಕ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಕೇವಲ ಕೆಲ ಪದಗಳನ್ನು ಮಾತ್ರ ಬಳಸಬೇಕು ಎಂದು ಆಯೋಗದಲ್ಲಿರುವ ಮೂರು ಮಂದಿ ನಿರ್ಧರಿಸುತ್ತಾರೆ. ಅವರು ಹೇಳಿದಂತೆ ನಾವು ಚುನಾವಣೆ ಪ್ರಚಾರ ಮಾಡಬೇಕಂತೆ. ಹೀಗಾದರೆ ಚುನಾವಣೆಯಲ್ಲಿ ಗೆಲ್ಲುವುದರ ಬದಲು ಸೋಲುವುದೇ ಖಚಿತ ಎಂದೆನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಇದಲ್ಲದೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಸಲ್ಮಾನ್ ಖುರ್ಷಿದ್ ಟೀಕಿಸಿದ್ದಾರೆ. ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುತ್ತಾ, ಈ ರೀತಿ ಆಗಬಾರದಿತ್ತು, ಇಂತಹದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಕೋರ್ಟ್‌ನಲ್ಲಿ ಕುಳಿತು ನ್ಯಾಯಾಮೂರ್ತಿಗಳು ಹೇಳುತ್ತಾರೆ. ಇಬ್ಬರು ನ್ಯಾಯಾಧೀಶರು ಸಂಸತ್ ಸದಸ್ಯರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು. ಸದಸ್ಯರು ಚುನಾವಣೆಯಲ್ಲಿ ನಿಲ್ಲಬೇಕೋ ಅಥವಾ ಬೇಡವೋ ಎಂಬುದು ಅವರೇ ನಿರ್ಧರಿಸುತ್ತಾರೆ. ಹಾಗಾದರೆ ಸದಸ್ಯರು ಯಾವ ಅಫಿಡವಿಟ್ ಸಲ್ಲಿಸಬೇಕು ಎಂದು ಖುರ್ಷಿದ್ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಖುರ್ಷಿದ್ ಸುಪ್ರೀಂ ಮತ್ತು ಚು.ಆಯೋಗವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು ವಿವಾದಕ್ಕೀಡಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement