ಸೈಫ್ ಅಲಿಖಾನ್ ವಿರುದ್ಧ ಪ್ರಕರಣ ದಾಖಲು
ಅನಿವಾಸಿ ಭಾರತೀಯನ ಮೇಲೆ ಹಲ್ಲೆ ಮಾಡಿದ ಸಂಬಂಧ ಬಾಲಿವುಡ್ ನಟ ಸೈಫ್ ಅಲಿಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ...
ಮುಂಬೈ: ಅನಿವಾಸಿ ಭಾರತೀಯನ ಮೇಲೆ ಹಲ್ಲೆ ಮಾಡಿದ ಸಂಬಂಧ ಬಾಲಿವುಡ್ ನಟ ಸೈಫ್ ಅಲಿಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸೈಫ್ ಅಲಿಖಾನ್ ಸೇರಿದಂತೆ ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
2012 ಫೆಬ್ರವರಿ 22ರಂದು ಸೈಫ್ ಅಲಿಖಾನ್ ಪತ್ನಿ ಕರೀನಾ ಕರಿಷ್ಮಾ, ಮಲೈಕಾ ಅರೋರಾ ಖಾನ್ ಮತ್ತು ಇತರೆ ಸ್ನೇಹಿತರೊಂದಿಗೆ ತಾಜ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು.
ಅದೇ ದಿನ ಅನಿವಾಸಿ ಭಾರತೀಯ ಇಕ್ಬಾಲ್ ಶರ್ಮಾ ಅವರು ತಮ್ಮ ಕುಟುಂಬ ಸಮೇತ ರಾತ್ರಿ ಭೋಜನಕ್ಕಾಗಿ ಈ ಹೋಟೆಲ್ಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಪಕ್ಕದ ಟೇಬಲ್ನಲ್ಲಿದ್ದ ಸೈಫ್ ತಮ್ಮ ಸ್ನೇಹಿತರೊಂದಿಗೆ ಕೂಗಾಡುತ್ತಿದ್ದರು. ಶಾಂತಿ ಬೇಕಾದರೆ ಗ್ರಂಥಾಲಯಕ್ಕೆ ಹೋಗು ಎಂದು ಸೈಫ್ ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿತ್ತು.
ಸುಮ್ಮನಿರಿ ಎಂದ ಮಾತ್ರಕ್ಕೆ ಸೈಫ್ ಮತ್ತು ಅವರ ಇಬ್ಬರು ಸ್ನೇಹಿತರು ನನಗೂ ಹಾಗೂ ನನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ತದ ನಂತರ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಇಕ್ಬಾಲ್ ಶರ್ಮಾ ದೂರು ದಾಖಲಿಸಿದ್ದರು.